
ಉಡುಪಿ ಡಿ. 18 : ಬಿಜೆಪಿ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಹಾಗೂ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರ ಅಭಿವೃದ್ಧಿಯನ್ನು ಬೆಂಬಲಿಸಿ, ನಾಯಕತ್ವವನ್ನು ಮೆಚ್ಚಿ ಕಾಂಗ್ರೆಸ್ ಬೆಂಬಲಿತ ಕೊಕ್ಕರ್ಣೆ ಪಂಚಾಯತ್ ಮಾಜಿ ಸದಸ್ಯ ವಸಂತ್ ನಾಯ್ಕ್ ಒಳಬೈಲು ಇಂದು ಶಾಸಕ ಶ್ರೀ.ಕೆ.ರಘುಪತಿ ಭಟ್ ರವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್, ಜಿಲ್ಲಾ ಬಿಜೆಪಿ ಸಹ ವಕ್ತಾರರಾದ ವಸಂತ್ ಸೇರ್ವೆಗಾರ್, ಮಾಜಿ ಸೈನಿಕ ಪ್ರಕೋಷ್ಠದ ಸಂಚಾಲಕರಾದ ವಸಂತ್ ಕುಮಾರ್, ಗ್ರಾಮಾಂತರ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್ ಕುಮಾರ್, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಉಮೇಶ್ ನಾಯ್ಕ್, ಕೊಕ್ಕರ್ಣೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಸನ್ನ ಶೆಟ್ಟಿ ಮತ್ತು ಸ್ಥಳೀಯ ಪ್ರಮುಖರಾದ ಸಾಂತ್ ನಾಯ್ಕ್ ಒಳಬೈಲು, ಪ್ರಕಾಶ್ ಒಳಬೈಲು, ವಾಮನ ಗೌರಿಬೆಟ್ಟು, ಶಶಿಧರ ಶೆಟ್ಟಿ ಕೆಂಜೂರು ಹಾಗೂ ಪಕ್ಷದ ಹಿರಿಯರು, ಕಾರ್ಯಕರ್ತರು ಉಪಸ್ಥಿತರಿದ್ದರು.