ರಾಜ್ಯ
ಗ್ರಾಮ ಪಂಚಾಯತಿ ಚುನಾವಣೆ: ಅವಿರೋಧವಾಗಿ ಆಯ್ಕೆಗೊಂಡವರಿಗೆ ಶಾಕಿಂಗ್

ಬೆಂಗಳೂರು 18: ಗ್ರಾಮ ಪಂಚಾಯತ್ ಗಳಿಗೆ ಸದಸ್ಯರ ಅವಿರೋಧ ಆಯ್ಕೆ ನಡೆದ ಕೆಲವೆಡೆ ಭಾರೀ ಅವ್ಯವಹಾರ, ಅಕ್ರಮ ನಡೆದಿರುವುದು ಚುನಾವಣಾ ಆಯೋಗದ ಗಮನಕ್ಕೆ ಬಂದಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಣಕ್ಕಾಗಿ ಅಭ್ಯರ್ಥಿಗಳನ್ನು ಹರಾಜು ನಡೆಸಿ, ಆಯ್ಕೆಯಾದರೆ ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ಚುನಾವಣಾ ಆಯೋಗ ಮುಂದಾಗಿದೆ.
ರಾಜ್ಯ ಚುನಾವಣಾ ಆಯೋಗದ ಆಯುಕ್ತ ಡಾ.ಬಿ.ಬಸವರಾಜು ಈ ಕುರಿತು ಮಾಹಿತಿಯನ್ನು ನೀಡಿದ್ದು, ಗ್ರಾಮ ಪಂಚಾಯ್ತಿ ಸ್ಥಾನಗಳನ್ನು ಬಹಿರಂಗವಾಗಿ ಹರಾಜು ಹಾಕುವುದು, ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ರೀತಿಯ 8 ಪ್ರಕರಣ ಈಗಾಗಲೇ ದಾಖಲಾಗಿದೆ. ಇಂತಹವರ ವಿರುದ್ಧ ಕ್ರಮಜರುಗಿಸಿ, ಅವಿರೋಧ ವಾಗಿ ಆಯ್ಕೆಗೊಂಡ ಸದಸ್ಯರನ್ನು ಅನರ್ಹ ಗೊಳಿಸಲಾಗುವುದು ಎಂದು ಹೇಳಿದ್ದಾರೆ.