ರಾಜ್ಯ

ರಾಣಿ ಅಬ್ಬಕ್ಕ ಭವನಕ್ಕೆ ನೀಡಬೇಕಾದ ಜಮೀನನ್ನು ಬ್ಯಾರಿ ಭವನಕ್ಕೆ ನೀಡಿದ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿದ ಅ.ಭಾ.ಹಿಂ.ಮ.ಸಭಾ

ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಹೆಗ್ಗಳಿಕೆಯ “ಉಳ್ಳಾಲ ರಾಣಿ ಅಬ್ಬಕ್ಕ ” ಹೆಸರು ಎಲ್ಲರಿಗೂ ಗೊತ್ತಿರುವ ವಿಚಾರವಾಗಿರುತ್ತದೆ. ಅವರ ಆರಾಧಕರು ಜಿಲ್ಲೆ, ರಾಜ್ಯ ಮತ್ತು ದೇಶದಲ್ಲಿ ಕಮ್ಮಿಯಿಲ್ಲ. ದೇಶದಲ್ಲಿ ಪೋರ್ಚ್ ಗೀಸರ ಜತೆ ಹೋರಾಡಿದ ಪ್ರಥಮ ಮಹಿಳಾ ರಾಣಿ ಮತ್ತು ಇಂಗ್ಲೀಷರ ಜೊತೆ ನಾಲ್ಕು ದಶಕಗಳ ಕಾಲ ಹೋರಾಡಿ ಉಳ್ಳಾಲ ಬಂದರು ಪ್ರದೇಶವನ್ನು ಕಾಪಾಡಿದ ವೀರರಾಣಿ ಅಬ್ಬಕ್ಕ ದೇವಿಯ ಹೆಸರಿನಲ್ಲಿ ಭವನ ನಿರ್ಮಾಣಕ್ಕಾಗಿ ಉಳ್ಳಾಲ ಮತ್ತು ರಾಣಿ ಅಬ್ಬಕ್ಕ ಅಭಿಮಾನಿಗಳು ತೊಕೊಟು ಬಸ್ಸು ನಿಲ್ದಾಣದ ಹಿಂಭಾಗದ ಜಾಗವನ್ನು ಗುರುಸಿದರು.

ರಾಣಿ ಅಬ್ಬಕ್ಕ ಭವನ ನಿರ್ಮಾಣ ಮಾಡಲು ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಆ ಜಮೀನನ್ನು ರಾಣಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ನೀಡದೆ, ಬ್ಯಾರಿ ಭವನಕ್ಕೆ ನೀಡಬೇಕೆಂದು ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯವನ್ನು ಓಲೈಕೆ ಮಾಡಿರುವುದು ಖಂಡನೀಯ ಮತ್ತು ಇದು ಜಿಲ್ಲೆಯ ಜನತೆಗೆ ಸರಕಾರ ಮಾಡಿರುವ ಅನ್ಯಾಯ ವಾಗಿರುತ್ತದೆ. ಈ ಕೂಡಲೇ ಈ ಜಮೀನನ್ನು ರಾಣಿ ಅಬ್ಬಕ್ಕ ಭವನದ ನಿರ್ಮಾಣಕ್ಕೆ ಮೀಸಲಿರಿಸಿ, ಬ್ಯಾರಿ ಭವನಕ್ಕೆ ಬೇರೆ ಸ್ಥಳವನ್ನು ನೀಡಿ, ಜಿಲ್ಲೆಯ ಜನತೆಯಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಅಖಿಲ ಭಾರತ ಹಿಂದೂ ಮಹಾಸಭಾ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಜಿಲ್ಲಾಧಿಕಾರಿಯವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ನೀಡಿದೆ.

ಕೋಮು ಸೂಕ್ಷ್ಮ ಪ್ರದೇಶದ ಅರಿವಿದ್ದು ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಾಗ ನೀಡಲು ಒಪ್ಪಿದ್ದು ಯಕ್ಷಪ್ರಶ್ನೆಯಾಗಿರುತ್ತದೆ. ಈ ಕೂಡಲೆ ಈ ನಿರ್ಧಾರವನ್ನು ಬದಲಾಯಿಸಬೇಕಾಗಿ ಮತ್ತು ಯಾವುದೇ ಕಾರಣಕ್ಕೂ ಶೀಘ್ರ ಶಿಲಾನ್ಯಾಸ ಕೈಗೊಳ್ಳುವುದನ್ನು ಕೈ ಬಿಟ್ಟು, ಜಿಲ್ಲಾಧಿಕಾರಿಗಳು ಜಿಲ್ಲೆಯ ವಾಸ್ತವಿಕತೆಯ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಆದೇಶವನ್ನು ತಡೆಹಿಡಿಯಬೇಕಾಗಿ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾಧ್ಯಕ್ಷ  ಲೋಕೇಶ್ ಉಳ್ಳಾಲ, ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ಅನುರಾಧ, ಮಂಗಳೂರು ವಿಧಾನ ಸಭಾ ಕ್ಷೇತ್ರ ಉಪಾಧ್ಯಕ್ಷ ಕೆ.ಪಿ.ಉದಯ ಕುಮಾರ್ ಹೆಗಡೆ, ಹಿಂದೂ ಯುವಕ ಸಭಾ ದ.ಕ ಜಿಲ್ಲಾಧ್ಯಕ್ಷ ಚಿದಂಬರ ರಾವ್, ಹಿಂದೂ ಶ್ರಮಿಕ್ ಸಭಾ ದ.ಕ ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಭಟ್, ಪವನ್, ಯತೀಶ್ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!