ರಾಷ್ಟ್ರೀಯ
ಗಣರಾಜ್ಯೋತ್ಸವ ಪೆರೇಡ್’ನಲ್ಲಿ ಫ್ಲೇಯಿಂಗ್ ಆಫಿಸರ್ ಕರ್ನಂಡ ಮನೋಜ್ ಕುಟ್ಟಪ್ಪ
ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ದೆಹಲಿಯಲ್ಲಿ ನಡೆಯುವ ಆಕರ್ಷಕ ಮೆರವಣಿಗೆ ಯಲ್ಲಿ ಭಾರತೀಯ ವಾಯುಸೇನೆಯ ತಂಡವನ್ನು ದಕ್ಷಿಣ ಕೊಡಗಿನ ಟಿ ಶೆಟ್ಟಿಗೇರಿಯವರಾದ ಪ್ರಸ್ತುತ ವಾಯು ಸೇನೆಯಲ್ಲಿ ಫ್ಲೇಯಿಂಗ್ ಆಫಿಸರ್ ಆಗಿ ಸೇವೆ ಸಲ್ಲಿಸುತ್ತಿರುವ ಕರ್ನಂಡ ಮನೋಜ್ ಕುಟ್ಟಪ್ಪ ಭಾಗವಹಿಸಲಿದ್ದಾರೆ.
ಮೆರವಣಿಗೆಯಲ್ಲಿ ವಾಯುಸೇನೆಯ ತಂಡದ ಮೊದಲ ಸಾಲಿನ ಮೂವರು ಅಧಿಕಾರಿಗಳಲ್ಲಿ ಎಡಗಡೆಯವರಾಗಿ ಭಾಗವಹಿಸಲು ಸ್ಥಾನ ಪಡೆದು ಕೊಂಡಿರುವ ಕರ್ನಂಡ ಮನೋಜ್ ಕುಟ್ಟಪ್ಪ ಮಡಿಕೇರಿಯ ಜವಾಹರ್ ನವೋದಯದ ವಿಧ್ಯಾರ್ಥಿಯಾಗಿದ್ದು, ಬೆಂಗಳೂರಿನ ರೇವಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಪದವಿದರರಾಗಿ ಕಳೆದ ಒಂದು ವರ್ಷದ ಹಿಂದೆ ವಾಯುಸೇನೆಗೆ ಸೇರ್ಪಡೆಯಾದ ಇವರು ಅತೀ ಸಣ್ಣ ಅವಧಿಯಲ್ಲಿ ಗಮನ ಸೆಳೆದಿದ್ದಾರೆ.