ಟ್ವಿಟರ್ಗೆ ‘ಟಕ್ಕರು’ ನೀಡಲು ಸ್ವದೇಶಿ ‘ಕೂ’ ಅಪ್ನತ್ತ ಕೇಂದ್ರ ಸರ್ಕಾರದ ಇಲಾಖೆಗಳು

ಸರ್ಕಾರದ ಆದೇಶಗಳ ಹೊರತಾಗಿಯೂ, ದೇಶವಿರೋಧಿ ಚಟುವಟಿಕೆಗಳನ್ನು ತೆಗೆದು ಹಾಕಲು ಅಥಾವ ನಿಲ್ಲಿಸಲು ಟ್ವಿಟರ್ ಮುಂದಾಗುತ್ತಿಲ್ಲ. ಇದೀಗ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ಅದರ ಅನೇಕ ಸಂಸ್ಥೆಗಳು ಮೈಕ್ರೋ ಬ್ಲಾಗಿಂಗ್ ಪ್ಲಾಟ್ ಫಾರ್ಮ್ ಟ್ವಿಟರ್ ನಿಂದ ‘ಕು’ (ಕೂ) ಎಂಬ ‘ಮೇಡ್ ಇನ್ ಇಂಡಿಯಾ’ ಪ್ಲಾಟ್ ಫಾರ್ಮ್ ನತ್ತ ಮುಖ ಮಾಡಿದೆ.
ಈ ವರದಿಯ ಪ್ರಕಾರ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ, ಮೈಗೋವ್, ಡಿಜಿಟಲ್ ಇಂಡಿಯಾ, ಇಂಡಿಯಾ ಪೋಸ್ಟ್, ಎನ್ ಐಸಿ, NIELIT, ಸಮೀರ್, ಕಾಮನ್ ಸರ್ವೀಸಸ್ ಸೆಂಟರ್, ಉಮಂಗ್ ಆಪ್, ಡಿಜಿ ಲಾಕರ್, ಎನ್ ಐಸಿ, ಎಸ್ ಟಿಪಿಐ, ಸಿಡಿಎಸಿ, ಮತ್ತು ಸಿ.ಎಂ.ಇ.ಟಿ ಇಲಾಖೆಗಳು ಕೂ ಅಪ್ನಲ್ಲಿ ತಮ್ಮ ಖಾತೆಯನ್ನು ತೆರೆಯಲು ಮುಂದಾಗಿದೆ ಎನ್ನಲಾಗಿದೆ.
ನ್ಯೂಸ್18 ಸುದ್ದಿ ವಾಹಿನಿ ಪ್ರಕಾರ, ” ಕೆಲ ಟ್ವಿಟರ್ ಖಾತೆಯು ಖಲಿಸ್ತಾನಿ ಬೆಂಬಲಿಗರು ಅಥವಾ ಪಾಕಿಸ್ತಾನ ಬೆಂಬಲಿತ ಮತ್ತು ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿದೆ. ಇದಲ್ಲದೇ ಕೆಲ ಅನೇಕ ಖಾತೆಗಳು ಸ್ವಯಂ ಚಾಲಿತ ಬೋಟ್ ಗಳಾಗಿವೆ, ಇದನ್ನು ರೈತರ ಪ್ರತಿಭಟನೆ ಹೆಸರಿನಲ್ಲಿ ತಪ್ಪು ಮಾಹಿತಿ ಮತ್ತು ಪ್ರದರ್ಧದ ಸಾಮಗ್ರಿಯನ್ನು ಹಂಚಿಕೊಳ್ಳಲು ಬಳಸಲಾಗುದೆ ಅಂತ ಹೇಳಿದೆ. ಪ್ರಧಾನಿ ಮೋದಿ ಅವರು ಕಿಸಾನ್ ಹತ್ಯಾಕಾಂಡಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಮಾಡಿದ್ದ ಖಾತೆಯನ್ನು ಬ್ಲಾಕ್ ಮಾಡಲು ಟ್ವಿಟ್ಟರ್ ಇತ್ತೀಚೆಗೆ ನಿರಾಕರಿಸಿರುವುದನ್ನು ಇಲ್ಲಿ ನಾವು ಕಾಣಬಹುದು. 2021ರ ಜನವರಿ 31ರಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಟ್ವಿಟರ್ ಖಾತೆಗಳು ಮತ್ತು ಟ್ವೀಟ್ ಗಳ 257 ಲಿಂಕ್ ಗಳ ಪಟ್ಟಿಯನ್ನು ಟ್ವಿಟರ್ ಗೆ ಹಸ್ತಾಂತರಿಸಿದೆ, ಆದರೆ ಇಲ್ಲಿ ತನಕ ಯಾವುದೇ ಕ್ರಮವನ್ನು ಇನ್ನೂ ಕೈಗೊಂಡಿಲ್ಲ ಟ್ವಿಟರ್…