
ವಿಜಯನಗರ ಜಿಲ್ಲೆ ಹೊಸಪೇಟೆ ನಗರ ವ್ಯಾಪ್ತಿಯ ಚಿತ್ವಾಡ್ಗಿ ಹೊಸೂರು ರಸ್ಥೆಯಲ್ಲಿರುವ, ಮೃಹತ್ ಕಾಲುವೆಯಲ್ಲಿ ಈಜಲು ಹೋದ ಬಾಲಕರಿಬ್ಬರು ಮೃತಪಟ್ಟ ಘಟನೆ ಜರುಗಿದೆ. ಬಾಲಕರಿಬ್ಬರೂ ಹೊಸಪೇಟೆ ನಗರದ ಇಂದಿರಾ ನಗರದ ನಿವಾಸಿಗಳಾಗಿದ್ದು ಈಜುಬಾರದೆ ಮೃತಪಟ್ಟ ಬಾಲಕರಾಗಿದ್ದಾರೆ,ಯುವರಾಜು(11) ಹಾಗೂ ವೇಣು(10) ಕಾಲುವೆಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ ಬಾಲಕರಾಗಿದ್ದಾರೆ.
ಇವರು ನಗರದ ಚಿತವಾಡ್ಗಿ ಹೊಸೂರು ಗ್ರಾಮದ ಬಳಿ ಹಾದು ಹೋಗಿರುವ ರಾಯ ಕಾಲುವೆಯಲ್ಲಿ, ಈಜಾಡಲು ಹೋಗಿ ಪ್ರಾಣಕಳೆದುಕೊಂಡಿದ್ದಾರೆ. ಅವಘಡ ಬುಧವಾರದಂದು ಜರುಗಿದ್ದು ಅವರ ಕಳೇಬರ ಗುರುವಾರದಂದು ಪತ್ತೆಯಾಗಿವೆ ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಜರುಗಿದ್ದು ಪ್ರಕರಣ ದಾಖಲಾಗಿದೆ.