ರಾಜ್ಯ
ಕೊರೋನಾ ಲಸಿಕೆ ಪಡೆದ ಇನ್ಫೋಸಿಸ್ ಮೂರ್ತಿ ದಂಪತಿ
ಬೆಂಗಳೂರು: ಮೂರನೇ ಹಂತದ ವ್ಯಾಕ್ಸಿನ್ ಸೋಮವಾರ ಆರಂಭವಾಗಿದ್ದು, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರಾದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ, ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡರು.
ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರು ಒಟ್ಟಿಗೇ ಇಂದು ಬೆಳಗ್ಗೆ ಆಸ್ಪತ್ರೆಗೆ ತೆರಳಿ ವ್ಯಾಕ್ಸಿನ್ ಪಡೆದರು. ನಾರಾಯಣ ಹೆಲ್ತ್ ಸಿಟಿ ಸಂಸ್ಥಾಪಕ ಡಾ. ದೇವಿ ಶೆಟ್ಟಿ ಕೂಡ ಸಾಥ್ ನೀಡಿದರು.
ಕೋವಿಡ್ ವ್ಯಾಕ್ಸಿನ್ ಪಡೆಯುವ ಮೂಲಕ ವ್ಯಾಕ್ಸಿನ್ ಅಭಿಯಾನಕ್ಕೆ ನಾರಾಯಣಮೂರ್ತಿ ದಂಪತಿ ಬಲ ತುಂಬಿದ್ದು, ಹಿರಿಯ ನಾಗರಿಕರಿಗೆ ಮಾದರಿಯಾಗಿದ್ದಾರೆ.