ರಾಷ್ಟ್ರೀಯ
ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ, ಜನತೆಯಲ್ಲಿ ಹೆಚ್ಚಿದ ಆತಂಕ!
ಹೊಸದಿಲ್ಲಿ: ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನನಿತ್ಯ ಬಳಕೆ ವಸ್ತುಗಳ ಬೆಲೆಯೂ ಏರುತ್ತಲೇ ಇದೆ. ಈ ಮಧ್ಯೆ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ ಕಂಡಿದ್ದು, ಜನತೆಗೆ ಶಾಕ್ ನೀಡಿದೆ.
ಇಂದಿನಿಂದ ಜಾರಿಗೆ ಬಂದಿರುವ ಹೊಸ ನಿಯಮಗಳು ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿವೆ. ಹೊಸ ನಿಯಮಗಳ ಪ್ರಕಾರ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಇಂದಿನಿಂದ 25 ರೂ.ಗೆ ಹೆಚ್ಚಿಸಲಾಗಿದೆ. ಫೆಬ್ರವರಿ ನಂತರ ಇದು 4ನೇ ಏರಿಕೆಯಾಗಿದ್ದು, ಈಗ ಪ್ರತಿ ಸಿಲಿಂಡರ್ ಗೆ 125 ರೂ ಏರಿಕೆ ಅಗಿದೆ.
ಬೆಲೆ ಏರಿಕೆಯಿಂದಾಗಿ ಈಗ 5 ಕೆ.ಜಿ. ತೂಕದ ಗ್ಯಾಸ್ ಸಿಲಿಂಡರ್‌ಗೆ 304 ಹಾಗೂ 14.2 ಕೆ.ಜಿ. ತೂಕದ ಗ್ಯಾಸ್ ಸಿಲಿಂಡರ್‌ಗೆ 824 ರೂ. ತಲುಪಿದ್ದು, ಇಂದಿನಿಂದಲೇ (ಮಾರ್ಚ್ 1) ಹೊಸ ದರ ಜಾರಿಗೆ ಬಂದಿದೆ.