ಪೆಟ್ರೋಲ್, ಡೀಸೆಲ್ ದರ ಸ್ವಲ್ಪ ಇಳಿಕೆ
ಬೆಂಗಳೂರು: ಕಳೆದ ಮೂರು ತಿಂಗಳಿನಿಂದ ಏರುಮುಖವಾಗಿದ್ದ ಪೆಟ್ರೋಲ್, ಡೀಸೆಲ್ ದರ ಮಂಗಳವಾರ (ಮಾ.2) ಕ್ರಮವಾಗಿ 7 ಮತ್ತು 5 ಪೈಸೆಯಷ್ಟು ಇಳಿಕೆಯಾಗಿದೆ.
ಸೋಮವಾರ (ಮಾ.1) ಕೂಡ ಪ್ರತಿ ಲೀಟರ್ ಪೆಟ್ರೋಲ್‍ಗೆ 7 ಪೈಸೆ ಹೆಚ್ಚಳವಾಗಿತ್ತು. ಆದರೆ, ಇಂದು ಬೆಳಗ್ಗೆ 7 ಪೈಸೆಯಷ್ಟು ಕಡಿಮೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಇಂದು 94.22 ಪೈಸೆ ಇದೆ.
ಡೀಸೆಲ್ ಬೆಲೆ ಕೂಡ ಏರಿಕೆ ಗತಿಯಲ್ಲೇ ಇತ್ತು. ನಿನ್ನೆ 5 ಪೈಸೆ ಹೆಚ್ಚಳವಾಗಿತ್ತು. ಆದರೆ, ಇಂದು ಅದೇ 5 ಪೈಸೆ ಕಡಿಮೆಯಾಗಿದೆ. ದರ ಇಳಿಕೆಯ ಪ್ರಮಾಣ ಅತ್ಯಂತ ಕಡಿಮೆ ಇದ್ದರೂ ಕನಿಷ್ಠ ಏರಿಕೆ ಗತಿಯಿಂದ ಇಳಿಕೆ ಗತಿಗೆ ಮುಖ ಮಾಡಿರುವುದು ಆಶಾದಾಯಕ ಬೆಳವಣಿಗೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿದ್ದರಿಂದಾಗಿ ದರ ಇಳಿಕೆಯಾಗುತ್ತಿದೆಯೇ ಎಂಬ ಅನುಮಾನವೂ ಇದೆ.
ಅಡುಗೆ ಅನಿಲ ದರವನ್ನು ಕೂಡ ಕಳೆದ ತಿಂಗಳಿನಲ್ಲಿ ಮೂರು ಬಾರಿ ತಲಾ 25ರೂ.ಗಳಂತೆ ಹೆಚ್ಚಳ ಮಾಡಲಾಗಿತ್ತು. ನಿನ್ನೆ ಕೂಡ 25 ರೂ. ಪ್ರತಿ ಸಿಲಿಂಡರ್ ಮೇಲೆ ಹಚ್ಚಳವಾಗಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಬೆಲೆಯೂ ಹೆಚ್ಚಳವಾಗಿದೆ.