RTI ಕಾರ್ಯಕರ್ತರ ಮೇಲಿನ ಹಲ್ಲೆ ಮತ್ತು ಹಿಂಸೆಯನ್ನು ಖಂಡಿಸಿ ಜೈನ ಸಮಾಜದಿಂದ ಮನವಿ

ಉಡುಪಿ : ತುಳುನಾಡಿನ ಪುರಾತನ ರಾಜಧಾನಿ ಉಡುಪಿ ಜಿಲ್ಲೆಯ ಬಾರ್ಕೂರಿನಲ್ಲಿ ಜೈನ ಅರಸರ ಕಾಲದಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಬಸದಿಗಳ, ದೇವಸ್ಥಾನಗಳ ನಿರ್ಮಾಣವಾಗಿದ್ದು ಇದು ಶಿಲಾಶಾಸನಗಳ ಮೂಲಕ ತಿಳಿದುಬರುತ್ತದೆ. ಇವುಗಳಲ್ಲಿ ಬ್ರಹ್ಮಾವರ ತಾಲೂಕು ಕೋಟ ಹೋಬಳಿಯ ಹೊಸಾಳ ಗ್ರಾಮದ ವ್ಯಾಪ್ತಿಯ ಸಾವಿರದ ಇನ್ನೂರು ವರ್ಷಗಳಷ್ಟು ಪುರಾತನವಾದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಮತ್ತು ಶ್ರೀ ಆದಿನಾಥ ಸ್ವಾಮಿ ಬಸದಿ ಗಳು ಸೇರಿವೆ.. ಈ ಪ್ರದೇಶವನ್ನು ಹಲವಾರು ಜನರು ಅತಿಕ್ರಮಿಸಿ ಕೊಂಡಿದ್ದು ಬಸದಿಯ ಪ್ರದೇಶವನ್ನು ಗೊಬ್ಬರ ಹಾಕಲುಟಾಯ್ಲೆಟ್ ಗುಂಡಿಗಳನ್ನು ಮಾಡಿಕೊಂಡು ಕಸವನ್ನು ಹಾಕಲು ಉಪಯೋಗಿಸಿಕೊಳ್ಳುತ್ತಿದ್ದಾರೆ.

ಆಕ್ರಮಿತ ಪ್ರದೇಶವನ್ನು ಈಗಾಗಲೇ ಬಾರ್ಕೂರಿನ ಜೈನ ಸಮಾಜದ ಮನವಿಯಂತೆ ತಹಶೀಲ್ದಾರರು ಸರ್ವೇಯನ್ನು ನಡೆಸಿದ್ದು ಒತ್ತುವರಿ ಮಾಡಿರುವ ಬಗ್ಗೆ ಸರ್ವೆ ವರದಿಯಲ್ಲಿ ಕಂಡುಬಂದಿದ್ದು ಅತಿಕ್ರಮಣದಾರರಿಗೆ ಅತಿಕ್ರಮಣ ತೆರವು ಮಾಡುವಂತೆ ನೋಟೀಸನ್ನು ನೀಡಿರುತ್ತಾರೆ. ಆದರೆ ಇದುವರೆಗೆ ಸ್ವಾದಿನತೆ ಬಿಟ್ಟು ಕೊಟ್ಟಿರುವುದಿಲ್ಲ ತೆರವುಗೊಳಿಸುವುದಿಲ್ಲ.

ಜೈನ ಸಮಾಜವು ಈ ಬಸದಿಗಳ ರಕ್ಷಣೆಗೆ ಕಾರ್ಯಪ್ರವೃತ್ತರಾಗಿದ್ದು ಬಾರಕೂರಿನ ಕಾರ್ಯಕರ್ತ ಶಂಕರ ಶಾಂತಿಯವರು ದಾಖಲೆಗಳನ್ನು ಒದಗಿಸಲು ಸಹಕರಿಸಿದ್ದರು.
ಆದ್ದರಿಂದ ಆರ್ಟಿಐ ಕಾರ್ಯಕರ್ತ ಶಂಕರ್ ಶಾಂತಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.
ಬಸದಿಯನ್ನು ಆಕ್ರಮಿಸಿರುವ ಪ್ರದೇಶವನ್ನು ತಕ್ಷಣವೇ ತೆರವುಗೊಳಿಸಿ ತಂತಿಬೇಲಿಯನ್ನು ನಿರ್ಮಿಸಿ ತಾತ್ಕಾಲಿಕ ರಕ್ಷಣೆಯನ್ನು ಒದಗಿಸುವಂತೆ ಹಾಗೂ ಆರ್ ಟಿಐ ಕಾರ್ಯಕರ್ತ ಶಂಕರ್ ಶಾಂತಿ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಆರೋಪಿತರನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಜೈನಸಮಾಜ ಹಾಗೂ ಜೈನ್ ಮಿಲನ್ ಗಳು ಆಗ್ರಹಿಸಿ ಜಿಲ್ಲಾಧಿಕಾರಿ ಉಡುಪಿಯವರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೂಡಬಿದ್ರೆ ಜೈನ ಮಠ ಪೂಜ್ಯಶ್ರೀ ಚಾರುಕೀರ್ತಿ ಭಟ್ಟಾರಕರ ಮನವಿಯನ್ನು ಕೂಡ ಹಸ್ತಾಂತರಿಸಲಾಯಿತು. ಉಡುಪಿ, ಕಾರ್ಕಳ, ಬಜಗೋಳಿ, ಬೆಳ್ತಂಗಡಿ, ಮೂಡಬಿದರೆ ,ಪುತ್ತೂರು ಪಡಂಗಡಿ ,ರಾಣಿ ಅಬ್ಬಕ್ಕ ಮಹಿಳಾ ಸಂಘ ಮಂಗಳೂರು, ಹಾಗೂ ಜೈನ ಸಮಾಜದ ಜೈನ ಬಾಂಧವರು ಪಾಲ್ಗೊಂಡಿದ್ದರು ಆನಂತರದಲ್ಲಿ ಹಲ್ಲೆಗೊಳಗಾದ ಶಂಕರ್ ಶಾಂತಿ ಅವರನ್ನು ಸರಕಾರಿ ಆಸ್ಪತ್ರೆಗೆ ತೆರಳಿ ವಿಚಾರ ಆರೋಗ್ಯ ವಿಚಾರಿಸಿ ನಂತರ ಹೆಚ್ಚುವರಿ ಪೊಲೀಸ್ ಅಧಿಕ್ಷಕ ರಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಜೈನ್ ಮಿಲನ್ ರಾಜ್ಯ ವಲಯ ನಿರ್ದೇಶಕರು ರಾಜವರ್ಮ ಅರಿಗ, ಉಡುಪಿ ಮಿಲನ್ ಅಧ್ಯಕ್ಷ ಸುಧೀರ್ ಕುಮಾರ್ ಯೇರ್ಮಾಲ್, ಕಾರ್ಯದರ್ಶಿ ಡಾಕ್ಟರ್ ಅರಿಹಂತ್, ಮಿಲನ್ ಪ್ರತಿನಿಧಿಗಳಾದ ವಕೀಲರಾದ ಶ್ವೇತಾ ಮೂಡಬಿದ್ರೆ, ಅಮರನಾಥ್ ಪ್ರಸಾದ್ ಕಾರ್ಕಳ,ಶ್ರೀ ಭರತ್ ರಾಜ್ ಜೈನ್, ಶ್ರೀ ನಿತೇಶ್ ಜೈನ್,ಆಳುಪ ಅರಸು ಮನೆತನದ ಡಾಕ್ಟರ್ ಆಕಾಶ್ ರಾಜ್ ಜೈನ್, ಶ್ರೀಮತಿ ಅಕ್ಷತಾ ಆದರ್ಶ್, ವಿವಿಧ ತಾಲೂಕಿನ ಜೈನ ಮಿಲನ್ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.