ಸಮಾಜಸೇವಕರಿಂದ ಮಾನಸಿಕ ಅಸ್ವಸ್ಥನ ರಕ್ಷಣೆ; ಸಂಬಂಧಿಕರಿಗೆ ಹಸ್ತಾಂತರ

ಉಡುಪಿ,ಮಾ.6; ಅರೆಬೆತ್ತಲಾಗಿ ಸಂಚರಿಸುತ್ತ, ಸಾರ್ವಜನಿಕರ ಮೇಲೆ ವಿನಾಕರಣ ಹಲ್ಲೆ, ಮಹಿಳೆಯರ ಕಂಡು ಅಶ್ಲಿಲವಾಗಿ ವರ್ತಿಸುತ್ತ, ಉಡುಪಿ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದ, ಅಪರಿಚಿತ ಮಾನಸಿಕ ಅಸ್ವಸ್ಥ ಯುವಕನನ್ನು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಶುಕ್ರವಾರ ರಕ್ಷಿಸಿದ್ದರು. ಆ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿದ್ದರು. ಮಣಿಪಾಲ ಹೊಸಬೆಳಕು ಆಶ್ರಮದ ಸಂಚಾಲಕ ವಿನಯಚಂದ್ರ ಸಾಸ್ತಾನ ಅವರು, ಯುವಕನಿಗೆ ಆಶ್ರಮದಲ್ಲಿ ಆಶ್ರಯ ಒದಗಿಸಿ ಮಾನವಿಯತೆ ತೋರಿದ್ದರು.
ಸಮಾಜಸೇವಕರು ಯುವಕನ ಸಂಬಂಧಿಕರ ಪತ್ತೆಗೊಳಿಸಲು ಜಾಲತಾಣದಲ್ಲಿ ಪ್ರಕಟಣೆ ಬಿತ್ತರಗೊಳಿಸಿದ್ದರು. ಯುವಕನ ಹುಡುಕಾಟದಲ್ಲಿದ್ದ ಸಂಬಂಧಿಕರು ವಿಷಯತಿಳಿದು ಶನಿವಾರ ಉಡುಪಿಗೆ ಬಂದಿದ್ದು, ಸಮಾಜಸೇವಕರನ್ನು ಸಂಪರ್ಕಿಸಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಯುವಕನು ಶಿಕಾರಿಪುರದ ನಿವಾಸಿಯಾಗಿದ್ದು, ಕೆಲವು ವರ್ಷಗಳಿಂದ ಮಾನಸಿಕ ವ್ಯಾಧಿಗೆ ತುತ್ತಾಗಿದ್ದನೆಂದು ಯುವಕನ ಸಹೋದರಿ ಹೇಳಿಕೊಂಡಿದ್ದಾರೆ. ಘಟನೆಯ ಬಗ್ಗೆ ಉಡುಪಿ ನ್ಯೂಸ್ ಅಂತರ್ಜಾಲ ಪತ್ರಿಕೆಯು ವರದಿ ಪ್ರಕಟಿಸಿತ್ತು. ಸಂಬಂಧಿಕರಿಗೆ ವಿಷಯ ಮುಟ್ಟಿಸುವಲ್ಲಿ ವರದಿ ಫಲಶ್ರುತಿ ಪಡೆದುಕೊಂಡಿತು.