
ಮಾರ್ಚ್ 18 ರ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ 1488 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9,65,102 ತಲುಪಿದೆ.
ಇದೇ ಸಂದರ್ಭದಲ್ಲಿ 341 ಮಂದಿ ಗುಣಮುಖರಾಗಿದ್ದು ಒಟ್ಟು ಗುಣಮುಖರಾದವರ ಸಂಖ್ಯೆ 9,41,309 ಕ್ಕೆ ಏರಿದೆ. ರಾಜ್ಯದಲ್ಲಿ ಒಟ್ಟು 11,359 ಸಕ್ರಿಯ ಪ್ರಕರಣಗಳಿವೆ. ಇಂದು 8 ಮಂದಿ ಮೃತಪಟ್ಟಿದ್ದು, ಇಲ್ಲಿಯವರೆಗೆ ಒಟ್ಟು 12,415 ಮಂದಿ ಸಾವನ್ನಪ್ಪಿದ್ದಾರೆ.
ಉಡುಪಿಯ ವರದಿ: ಉಡುಪಿಯಲ್ಲಿ 38 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 12 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 159 ಸಕ್ರಿಯ ಪ್ರಕರಣಗಳಿವೆ.
ದಕ್ಷಿಣ ಕನ್ನಡ ವರದಿ: ದ.ಕ.ದಲ್ಲಿ 64 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 14 ಮಂದಿ ಗುಣಮುಖರಾಗಿದ್ದಾರೆ. 428 ಸಕ್ರಿಯ ಪ್ರಕರಣಗಳಿವೆ.
ಉತ್ತರ ಕನ್ನಡ ವರದಿ: ಉ.ಕ.ದಲ್ಲಿ 9 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 3 ಮಂದಿ ಗುಣಮುಖರಾಗಿದ್ದಾರೆ. 57 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು ನಗರದಲ್ಲಿ ಒಂದೇ ದಿನ 925 ಮಂದಿಗೆ ಸೋಂಕು ತಗಲಿದ್ದು 7 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.