ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಘಟಕದ ನೂತನ ಅಧ್ಯಕ್ಷರಾಗಿ ಸಶಸ್ತ್ರ ಪಡೆಯನಿವೃತ್ತ ಯೋಧ ದೊಡ್ಡಣಗುಡ್ಡೆ ನಿವಾಸಿ ಜೆಸಿ ಕೇಶವ ಆಚಾರ್

ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಘಟಕದ 2021 ನೇ ಸಾಲಿನ ಪದಪ್ರಧಾನ ಸಮಾರಂಭವು ಮಾರ್ಚ್ 16, 2021 ಮಂಗಳವಾರ ಬೆಳಿಗ್ಗೆ ಉಡುಪಿಯ ಟೌನ್ ಹಾಲ್ ನಲ್ಲಿ ನೆರವೇರಿತು.
2021 ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಸಶಸ್ತ್ರ ಪಡೆಯನಿವೃತ್ತ ಯೋಧ ದೊಡ್ಡಣಗುಡ್ಡೆ ನಿವಾಸಿ ಜೆಸಿ ಕೇಶವ ಆಚಾರ್ ರವರು 2020ರ ಅಧ್ಯಕ್ಷ ಜೆ.ಸಿ ವಿಜಯ್ ಕುಮಾರ್ ರವರಿಂದ ಅಧಿಕಾರ ಪ್ರಮಾಣವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪ್ರಸ್ತುತ ಉಡುಪಿ ಜಿಲ್ಲಾ ಆಡಿಷನಲ್ ಸುಪರಿಂಟೆಂಡೆಂಟ್ ಓಫ್ ಪೊಲೀಸ್, ಹಾಗೂ ಇಂಡಿಯನ್ ಆರ್ಮಿ ಯ ನಿವೃತ್ತ ವೀರ ಯೋಧ ಶ್ರೀ ಕುಮಾರ್ ಚಂದ್ರ ಸರ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾನವೀಯ ಮೌಲ್ಯಗಳು ಹಾಗೂ ತಮ್ಮ ಒಬ್ಬ ಯೋಧನಾಗಿ ಮತ್ತು ಆರಕ್ಷಕ ನಾಗಿ ಪಡೆದ ಅನುಭವ ಹಾಗೂ ಒಬ್ಬ ಯೋಧನ ತ್ಯಾಗಮಯಿ ಜೀವನ ದ ಪುಟ ಗಳ ಅನಾವರಣ ಮಾಡಿ ಯೋಧರಿಗೆ ಮತ್ತು ಅವರ ಕುಟುಂಬ ವನ್ನು ನಾವೆಲ್ಲರೂ ಗೌರವಿಸುವ ಅಗತ್ಯತೆ ಕುರಿತಾಗಿ ಮಾತನಾಡಿದರು.
ಮುಖ್ಯ ಉಪಸ್ಥಿತಿಯಲ್ಲಿ ಜೆಸಿಐ ವಲಯ 15ರ ಪ್ರಪ್ರಥಮ ಮಹಿಳಾ ವಲಯಯಾಧ್ಯಕ್ಷೆ ಜೆಸಿಐ ಸೆನೆಟರ್ ಸೌಜನ್ಯ ಹೆಗ್ಡೆಯವರು ಉಪಸ್ಥಿತರಿದ್ದು ಜೇಸಿ ಸಂಸ್ಥೆಯ ಪ್ರಾಮುಖ್ಯತೆ ಮತ್ತು ಅದರ ದ್ಯೇಯೋದ್ದೇಶ ಗಳ ಬಗ್ಗೆ ಮಾತನಾಡಿ ಶುಭ ಹಾರೈಸಿದರು.
ಇನ್ಸ್ಟಾಲೇಷನ್ ಆಫೀಸರ್ ಆಗಿ ಪ್ರಸ್ತುತ ವಲಯ ಹದಿನೈದು ರಿಜಿಯನ್ ‘ ಸಿ’ ನ ಉಪಾಧ್ಯಕ್ಷ ಜೆಸಿ ಸತ್ಯನಾರಾಯಣ ಭಟ್ ಭಾಗವಹಿಸಿ ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ ಘಟಕದ ಸ್ಥಾಪಕ ಹಾಗೂ ಪ್ರಸ್ತುತ ವಲಯ 15ರ ವಲಯಾಧಿಕಾರಿ ಜೆ. ಎಫ್ . ಡಿ. ಎಂ. ಎನ್. ನಾಯಕ್ ಮತ್ತು ಕುಟುಂಬ, ನೂತನ ಅಧ್ಯಕ್ಷರ ತಂದೆ ಮತ್ತು ಕುಟುಂಬ,ಸ್ಥಾಪಕ ಅಧ್ಯಕ್ಷ ಜೆಸಿ ವಿಜಯ್ ಕುಮಾರ್ , ಉಪಾಧ್ಯಕ್ಷರಾದ ಜೆಸಿ ಅನಿಲ್ ಕುಮಾರ್ ಅಡೂರ್ ಹಾಗೂ ಘಟಕದ ಸ್ಥಾಪಕ ಸದಸ್ಯರು ಹಾಗೂ ನೂತನ ಸದಸ್ಯರು ಮತ್ತು ಇತರ ಜೆಸಿ ಮತ್ತು ಜೆಸಿಯೇತರ ಮಿತ್ರರು ಭಾಗವಹಿಸಿದ್ದರು.
ವಿಶೇಷ ಕಾರ್ಯಕ್ರಮದ ಅಂಗವಾಗಿ ಕಾರ್ಯಕ್ರಮ ದ ಮುಖ್ಯ ಅತಿಥಿ,ಮಾಜಿ ಯೋಧರಾದ ಪ್ರಸ್ತುತ ಉಡುಪಿ ಜಿಲ್ಲಾ ಅಡಿಷನಲ್ ಎಸ್ ಪಿ ಶ್ರೀ ಕುಮಾರ್ ಚಂದ್ರರವರು ದೇಶಸೇವೆಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿ ಗೌರವಿಸಲಾಯಿತು.ಹಾಗೆಯೇ ಇನ್ನಿಬ್ಬರು ನಮ್ಮ ದೊಡ್ಡಣಗುಡ್ಡೆಯ ಸ್ಥಳೀಯ ಸಮಾಜ ಸೇವೆ ಹಾಗೂ ನಿಸ್ವಾರ್ಥ ಸೇವೆ ಗಳಿಗಳಿಂದ ಗುರುತಿಸಲ್ಪಟ್ಟ ಅನರ್ಘ್ಯ ರತ್ನ ಶ್ರೀ ರಾಮದಾಸ ಶೆಟ್ಟಿ ದೊಡ್ಡಣಗುಡ್ಡೆ ಜನತಾ ವ್ಯಾಯಾಮ ಶಾಲೆಯ ಸ್ಥಾಪಕರು ಮತ್ತು ಕೊಡುಗೈ ದಾನಿ ಇನ್ನೊಬ್ಬರು ರಾಜೇಶ್ ಕುಮಾರ್ ಇವರು ಜನ ಸೇವೆಯೇ ಜನಾರ್ಧನ ಸೇವೆ ಎಂಬಂತೆ ಎಲ್ಲರ ಸುಖ ದುಃಖ ಗಳಿಗೆ ಸ್ಪಂದನೆ ನೀಡುತ್ತಿರುವ ಕ್ರಿಯಾಶೀಲ ಸಜ್ಜನ ವ್ಯಕ್ತಿ ಇವರನ್ನು ವೇದಿಕೆಯಲ್ಲಿ ಅತಿಥಿಗಳ ಸಮ್ಮುಖದಲ್ಲಿ “ಸೆಲ್ಯೂಟ್ ದ ಸೈಲೆಂಟ್ ವರ್ಕರ್” ಪುರಸ್ಕಾರದೊಂದಿಗೆ ವಿಶೇಷ ವಾಗಿ ಸನ್ಮಾನಿಸಲಾಯಿತು, ಗುಂಡಿಬೈಲ್ ವಾರ್ಡಿನ ನಗರ ಸಭಾ ಸದಸ್ಯ ಶ್ರೀ ಪ್ರಭಾಕರ್ ಪೂಜಾರಿ ಹಾಗೂ ಇನ್ನಿತರ ರಾಜಕೀಯ ಹಾಗೂ ಸ್ಥಳೀಯ ಸಮಾಜದ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದರು.ಕಾರ್ಯಕ್ರಮದ ಕೊನೆಯಲ್ಲಿ ಘಟಕದ ನೂತನ ಕಾರ್ಯದರ್ಶಿ ಜೆಸಿ ಸತೀಶ್ ಆಚಾರ್ ಸರ್ವರಿಗೂ ಧನ್ಯವಾದ ಸಮರ್ಪಿಸಿದರು.