ಕರಾವಳಿ

ಮಿಷನ್ ಕಾಂಪೌಂಡ್ ಬೈಲೂರು ರಸ್ತೆ ಅಗಲೀಕರಣ: ಭೂ ಮಾಲೀಕರೊಂದಿಗೆ ಸಭೆ

ಮಿಷನ್ ಕಾಂಪೌಂಡ್, ಬೈಲೂರು ರಸ್ತೆ ಅಗಲೀಕರಣ ಸಂಬಂಧ ಭೂಸ್ವಾಧೀನ ಪಡಿಸಲು ಟಿ.ಡಿ.ಆರ್. ಪ್ರಕ್ರಿಯೆಗೆ ನೋಟಿಫಿಕೇಶನ್ ಆಗಿರುವಂತೆ ಭೂಸ್ವಾಧೀನದ ಬಗ್ಗೆ ಭೂಮಾಲಕರೊಂದಿಗೆ ಉಡುಪಿ ನಗರಸಭೆ ಅಧ್ಯಕ್ಷರಾದ ಸುಮಿತ್ರ ನಾಯಕ್ ಅವರು ಬುಧವಾರ ನಗರಸಭೆ ಸತ್ಯಮೂರ್ತಿ ಸಭಾಂಗಣದಲ್ಲಿ ಸಭೆ ನಡೆಸಿದರು.

ಈ ಸಭೆಯಲ್ಲಿ 31ಭೂಮಾಲಕರು ರಸ್ತೆಯ ಮಧ್ಯ ಭಾಗದಿಂದ ತಲಾ 9 ಮೀಟರ್ ಅಗಲೀಕರಣದ ಒಪ್ಪಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ರಾಘವೇಂದ್ರ ಕಿಣಿ ಭೂ ಮಾಲಕರಿಗೆ ಟಿಡಿಆರ್ ನ ಬಗ್ಗೆ ಮಾಹಿತಿ ನೀಡಿದರು. ನಗರಸಭಾ ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಿರೀಶ್ ಅಂಚನ್, ನಗರಸಭಾ ಸದಸ್ಯರಾದ ಶ್ರೀ ಕೃಷ್ಣ ಕೊಡಂಚ,ರಮೇಶ್ ಕಾಂಚನ್, ವಿಜಯ ಪೂಜಾರಿ, ನಗರಸಭಾ ಪೌರಾಯುಕ್ತರಾದ ಕೆ.ಉದಯ ಶೆಟ್ಟಿ, ಕಾರ್ಯಪಾಲಕ ಅಭಿಯಂತರರಾದ ಮೋಹನರಾಜು , ಅಭಿಯಂತರರಾದ ದುರ್ಗಾ ಪ್ರಸಾದ್ , ತಾಲೂಕ ಸರ್ವೆಯರ್ ಪದ್ಮನಾಭ, ಗ್ರಾಮಲೆಕ್ಕಿಗ ಪುನೀತ್, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker