ಕಾಪು : ಬಂಡೆಗೆ ಢಿಕ್ಕಿ ಹೊಡೆದು ಅಪಾಯದ ಸ್ಥಿತಿಯಲ್ಲಿದ್ದ ಟಗ್ ನ 9 ಜನರ ರಕ್ಷಣೆ

ಕಾಪು : ಎನ್ಎಂಪಿಟಿ ಹೊರವಲಯದಲ್ಲಿ ನಿಲ್ಲಿಸಿದ್ದ ಕೋರಮಂಡಲ ವೆಸೆಲ್ ಟಗ್ ಆ್ಯಂಕರ್ ತುಂಡಾಗಿ ಗಾಳಿ ಮತ್ತು ಮಳೆಯ ರಭಸಕ್ಕೆ ಶನಿವಾರ ಕಾಪು ಲೈಟ್ ಹೌಸ್ ನಿಂದ ಸುಮಾರು 15 ಕಿಲೋ ಮೀಟರ್ ದೂರದ ಪಾರ್ ಎಂಬಲ್ಲಿ ಬಂಡೆಗೆ ಢಿಕ್ಕಿಯಾಗಿತ್ತು.ಸಾಮಾಜಿಕ ಜಾಲತಾಣದ ಮೂಲಕ ಹಲವು ಬಾರಿ ತಮ್ಮ ಪ್ರಾಣ ರಕ್ಷಣೆಗೆ ಮೊರೆ ಇಟ್ಟ ಟಗ್ ನ 9 ಮಂದಿ ಸಿಬಂದಿಯನ್ನು ಹವಾಮಾನ ವೈಪರೀತ್ಯದಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಇವರನ್ನು ಪಾರು ಮಾಡಲು ಕೋಸ್ಟ್ ಗಾಡ್೯ನ ವರಾಹ ನೌಕೆಯ ಮೂಲಕ ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ. ಹವಾಮಾನ ವೈಪರೀತ್ಯದಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿತ್ತು.
ಇಂದು ಬೆಳಿಗ್ಗೆ ಕೊಚ್ಚಿಯಿಂದ ಆಗಮಿಸಿದ ನೌಕಾ ಪಡೆಯ ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಿ ಕೋಸ್ಟ್ ಗಾಡ್೯ನ ವರಾಹ ನೌಕೆಯ ಮೂಲಕ ಎನ್ಎಂಪಿಟಿ ಬಂದರಿಗೆ ಕರೆತರಲಾಯಿತು.
ಲೈಫ್ ಜಾಕೆಟ್ ಇದ್ದರೂ ಸುಮಾರು 44 ಗಂಟೆಗಳ ಕಾಲ ಅಪಾಯದ ಸ್ಥಿತಿಯಲ್ಲಿ 9 ಜನ ಸಿಬಂದಿ ಸಮುದ್ರದ ಮಧ್ಯೆ ಕಾಲ ಕಳೆದಿದ್ದಾರೆ.