ರಾಜ್ಯ
ಸಾಮಾಜಿಕ ಜಾಲ ತಾಣದಲ್ಲಿ ಕೊರೋನಾದ ಬಗ್ಗೆ ತಪ್ಪು ಮಾಹಿತಿ: ಡಾ. ರಾಜು ಲೈಸೆನ್ಸ್ ಅಮಾನತಿಗೆ ತೀರ್ಮಾನ
ಬೆಂಗಳೂರು: ಕೊರೋನಾದ ಬಗ್ಗೆ ಭಯಪಡಬೇಕಾದ ಅಗತ್ಯ ಇಲ್ಲ. ಅದೊಂದು ಸಾಮಾನ್ಯ ರೋಗ. ಮಾಸ್ಕ್ ಧರಿಸಬೇಕಾಗಿಲ್ಲ. ಸಾಮಾಜಿಕ ಅಂತರ ಕಾಪಾಡಬೇಕಾಗಿಲ್ಲ. ಹೀಗೆ ಚಿತ್ರ ವಿಚಿತ್ರ ಸಲಹೆಗಳನ್ನು ಸಾಮಾಜಿಕ ಜಾಲ ತಾಣದ ಮೂಲಕ ಪ್ರಚಾರ ಮಾಡುತ್ತಿದ್ದ ವೈದ್ಯರೊಬ್ಬರ ಲೈಸೆನ್ಸ್ ಅಮಾನತು ಮಾಡಲು ತೀರ್ಮಾನಿಸಲಾಗಿದೆ.
ಮೂಡಲಪಾಳ್ಯದಲ್ಲಿ ಕ್ಲಿನಿಕ್ ಹೊಂದಿರುವ ಡಾ. ರಾಜು ಈ ರೀತಿ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಮೆಡಿಕಲ್ ಕೌನ್ಸಿಲ್ , ಲೈಸೆನ್ಸ್ಅ ಮಾನತಿಗೆ ತೀರ್ಮಾನಿಸಿದೆ ಎಂದು ವರದಿಯಾಗಿದೆ.
ರಾಜು ಕ್ಲಿನಿಕ್ ಗೆ ಬೀಗ ಜ಼ಡಿಯಲು ಆರೋಗ್ಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದು ಕೂಡ ವರದಿಯಾಗಿದೆ.