ರಾಷ್ಟ್ರೀಯ

ಮನೆಯಲ್ಲೇ ಕೊರೊನಾ ಟೆಸ್ಟ್ ಮಾಡಿಕೊಳ್ಳಲು ಅನುಮತಿ- ಯಾರು ಬಳಸಬಹುದು ಎಂಬ ಮಾಹಿತಿ ಇಲ್ಲಿದೆ

ಕೊರೊನಾ ಸೋಂಕು ಪತ್ತೆ ಹಚ್ಚಲು ಮನೆಯಲ್ಲಿಯೇ ರ್‍ಯಾಪಿಡ್ ಆಂಟಿಜೆನ್ ಕಿಟ್‌ಗಳನ್ನು ಬಳಸಿಕೊಂಡು ಪರೀಕ್ಷೆ ನಡೆಸಲು ಹೋಂ ಟೆಸ್ಟ್ ಕಿಟ್‌ಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಬುಧವಾರ ಅನುಮತಿ ನೀಡಿದೆ. ಜೊತೆಗೆ ಇದನ್ನು ಯಾರು ಮತ್ತು ಹೇಗೆ ಬಳಸಬಹುದು ಎಂಬುದರ ಕುರಿತು ವಿವರವಾದ ಮಾರ್ಗಸೂಚಿಗಳನ್ನು ನೀಡಿದೆ.

ಕೊರೊನಾ ರೋಗಲಕ್ಷಣವುಳ್ಳ ವ್ಯಕ್ತಿಗಳು ಮತ್ತು ಪ್ರಯೋಗಾಲಯದಲ್ಲಿ ಪಾಸಿಟಿವ್ ಬಂದ ವ್ಯಕ್ತಿಯ ಸಂಪರ್ಕಕ್ಕೆ ಬಂದ ವ್ಯಕ್ತಿಗಳು ಮಾತ್ರ ಮನೆಯಲ್ಲಿ ಈ ಹೋಂ ಕಿಟ್‌ಗಳನ್ನು ಬಳಸಬೇಕು ಎಂದು ಐಸಿಎಂಆರ್ ಸ್ಪಷ್ಟಪಡಿಸಿದೆ.

“ಈ ಹೋಂ ಕಿಟ್‌ಗಳನ್ನು ಬಳಸಿ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದ ಎಲ್ಲ ವ್ಯಕ್ತಿಗಳು ಇದನ್ನು ಅಧಿಕೃತ ಎಂದು ಪರಿಗಣಿಸಬಹುದು ಜೊತೆಗೆ ಮತ್ತೊಮ್ಮೆ ಕೊರೊನಾ ಪರೀಕ್ಷೆಯ ಅಗತ್ಯವಿಲ್ಲ. ಆದರೆ, ರೋಗ ಲಕ್ಷಣಗಳಿದ್ದು, ನೆಗೆಟಿವ್ ಬಂದರೆ, ಅವರು ಆರ್‌ಟಿಪಿಸಿಆರ್‌ ಟೆಸ್ಟ್ ಮಾಡಿಸಿಕೊಳ್ಳಬೇಕು” ಎಂದು ಐಸಿಎಂಆರ್ ಹೇಳಿದೆ.

CoviSelfTM (PathoCatch) COVID-19 OTC ಆಂಟಿಜೆನ್ ಎಲ್ಎಫ್ ಸಾಧನವನ್ನು ಪುಣೆ ಮೂಲದ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ಲಿಮಿಟೆಡ್ ತಯಾರಿಸಿದೆ. ಅಪ್ಲಿಕೇಶನ್‌ನಲ್ಲಿ ವಿವರಿಸಿದ ಪ್ರಕ್ರಿಯೆಯ ಪ್ರಕಾರ ಮನೆಯಲ್ಲಿ ಪರೀಕ್ಷೆಯನ್ನು ನಡೆಸಬೇಕು. ಈ ಅಪ್ಲಿಕೇಶನ್‌, ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬೇಕು ಎಂದು ಐಸಿಎಂಆರ್ ಹೇಳಿದೆ.

“ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪರೀಕ್ಷಾ ಕಾರ್ಯವಿಧಾನದ ಸಮಗ್ರ ಮಾರ್ಗದರ್ಶಿಯಾಗಿದೆ. ಇದು ರೋಗಿಗೆ ಪಾಸಿಟಿವ್ ಅಥವಾ ನೆಗೆಟಿವ್ ಪರೀಕ್ಷಾ ವರದಿಯನ್ನು ನೀಡುತ್ತದೆ” ಪರೀಕ್ಷಾ ವಿಧಾನವನ್ನು ಪೂರ್ಣಗೊಳಿಸಿದ ನಂತರ ಟೆಸ್ಟ್ ಪಟ್ಟಿಯ ಚಿತ್ರವನ್ನು ತೆಗೆದುಕೊಳ್ಳುವಂತೆ ಎಲ್ಲಾ ಬಳಕೆದಾರರಿಗೆ ಐಸಿಎಂಆರ್ ಸೂಚಿಸಿದೆ.

ಬಳಕೆದಾರರ ಫೋನ್‌ನ ಟೆಸ್ಟಿಂಗ್ ಡೇಟಾ, ಐಸಿಎಂಆರ್ ಕೋವಿಡ್ ಪರೀಕ್ಷಾ ಪೋರ್ಟಲ್‌ನೊಂದಿಗೆ ಸಂಪರ್ಕಿಸಲಾಗಿದ್ದು, ಸರ್ವರ್‌ನಲ್ಲಿ ಎಲ್ಲಾ ಡೇಟಾವನ್ನು ಅಂತಿಮವಾಗಿ ಸಂಗ್ರಹಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!