
ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ (ಗ್ರಾಮೀಣ ಕೂಟ ) ಸಂಸ್ಥೆ ವತಿಯಿಂದ ಉಡುಪಿ ಜಿಲ್ಲೆಯ ಪೊಲೀಸ್ ಠಾಣೆ ಗಳು ಮತ್ತು ಗ್ರಾಮ ಪಂಚಾಯತ್ ಗಳಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ ವಿತರಿಸಲಾಗುತ್ತಿದ್ದು. ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ ವಿತರಿಸುವ ಮೂಲಕ ಚಾಲನೆ ನೀಡಲಾಯಿತು .ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ (ಗ್ರಾಮೀಣ ಕೂಟ ) ಸಂಸ್ಥೆಯ ಡಿವಿಷನಲ್ ಮ್ಯಾನೇಜರ್ ಮಂಜುನಾಥ್ ಐ ಎಂ ಮತ್ತು ಏರಿಯಾ ಮ್ಯಾನೇಜರ್ ಪ್ರದೀಪ್ ಕುಮಾರ್ ಬಿ ಎಸ್ ಶಾಖಾಧಿಕಾರಿಗಳಾದ ಚಿದಾನಂದ ಮತ್ತು ರಘು ರವರು ಉಡುಪಿ ಜಿಲ್ಲಾ ಉಪ ಪೋಲೀಸ್ ವರಿಷ್ಠಾಧಿಕಾರಿ ಕುಮಾರ್ ಚಂದ್ರ ರವರಿಗೆ ಹಸ್ತಾಂತರಿಸಿದರು.
ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ (ಗ್ರಾಮೀಣ ಕೂಟ ) ಸಂಸ್ಥೆ ಕೋವಿಡ್ ಪ್ರಾರಂಭವಾದ ಕಳೆದ ವರ್ಷದಿಂದ ಕೊರನಾ ವಾರಿಯರ್ಸ ಗಳಾದ ಆಶಾಕಾರ್ಯಕರ್ತೆಯರು,ಪೋಲೀಸ್ ಸಿಬ್ಬಂದಿಗಳು,ಗ್ರಾಮಪಂಚಾಯತ್ ಸಿಬ್ಬಂದಿಗಳು,ಸುದ್ದಿ ಮಾಧ್ಯಮ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ ಮತ್ತು ಪೌರಕಾರ್ಮಿಕರಿಕೆ ಆಹಾರ ಕಿಟ್ ನೀಡುತ್ತ ಬಂದಿದ್ದೇವೆ,ಈ ಬಾರಿಯೂ ಅದನ್ನು ಪ್ರಾರಂಭಿಸಿದ್ದೇವೆ,ಕರೋನಾ ವಾರಿಯರ್ಸಗಳು ತಮ್ಮಜೀವ ಪಣಕ್ಕಿಟ್ಟು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾದದ್ದು ಎಂದು ಮಂಜುನಾಥ್ ಐ ಎಂ ತಮ್ಮ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.