
ಮಂಗಳೂರು: ಶನಿವಾರ ತಡರಾತ್ರಿ ಮಂಗಳೂರಿನ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಉಳ್ಳಾಲದ ಕೋಡಿಯಲ್ಲಿ ದಡಕ್ಕೆ ಬಂದು ಅಪ್ಪಳಿಸಿದ್ದು, ಅದರಲ್ಲಿದ್ದ ಹತ್ತು ಮಂದಿಯನ್ನು ರಕ್ಷಿಸಲಾಗಿದೆ.
ಉಳ್ಳಾಲದ ಅಶ್ರಫ್ ಎಂಬುವರಿಗೆ ಸೇರಿದ ಅಝಾನ್ ಹೆಸರಿನ ಬೋಟ್ ಶನಿವಾರ ರಾತ್ರಿ 1.30 ರ ಸುಮಾರಿಗೆ ಮಂಗಳೂರು ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಕುಡಿದ ಮತ್ತಿನಲ್ಲಿದ್ದ ಬೋಟ್ ಚಾಲಕ ಇನ್ನೋರ್ವನ ಕೈಗೆ ಬೋಟ್ ನೀಡಿದ ಪರಿಣಾಮ ಈ ದುರಂತ ನಡೆದಿದೆ ಎನ್ನಲಾಗಿದೆ.
ಕನ್ಯಾಕುಮಾರಿ ಮೂಲದ ಐವರು ಮೀನುಗಾರರು ಹಾಗೂ ಇತರ ಕಾರ್ಮಿಕರು ಸೇರಿ ಸುಮಾರು ಹತ್ತು ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.