
ವಾಷಿಂಗ್ಟನ್: ಚೀನಾ ದೇಶ ಕೊರೋನಾ ಬಗ್ಗೆ ಅಧಿಕೃತವಾಗಿ ಬಹಿರಂಗಪಡಿಸುವ ಮೊದಲೇ ಚೀನಾದ ವುಹಾನ್ ವೈರಾಣು ಸಂಸ್ಥೆಯ ಮೂವರು ಸಂಶೋಧಕರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಸುದ್ದಿ ಮಾಡಿದೆ.
ಎಷ್ಟು ಸಂಶೋಧಕರು ಸಂಶೋಧನೆ ವೇಳೆ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ದಾಖಲಾದ ಅವಧಿಯನ್ನು ವರದಿ ತಿಳಿಸಿದೆ.ಹೀಗಾಗಿ ಕೊರೊನಾ ವೈರಸ್ ಪ್ರಯೋಗಾಲಯದಿಂದ ಹಬ್ಬಿರುವ ಸಾಧ್ಯತೆಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಾಡಿದ ಒತ್ತಾಯ ಈಗ ಮತ್ತಷ್ಟು ಹೆಚ್ಚಿದೆ. ಇನ್ನು ಕೊರೊನಾ ವೈರಸ್ ಮೂಲದ ಕುರಿತು ಮುಂದಿನ ಹಂತದ ತನಿಖೆ ನಡೆಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶೀಘ್ರ ಸಭೆ ನಡೆಸಲಿದೆ ಎಂದು ತಿಳಿದು ಬಂದಿದೆ .