
ಉಡುಪಿ: ಬಿಲ್ಲವ ಸಮುದಾಯದ ಯುವ ಮುಂದಾಳು ತೋನ್ಸೆ ಪಂಚಾಯತ್ ಉಪಾಧ್ಯಕ್ಷರಾದ ನಿತ್ಯಾನಂದ ಕೆಮ್ಮಣ್ಣು ಭಾನುವಾರ ತನ್ನ 43ನೇ ವಯಸ್ಸಿನಲ್ಲಿ ನಿಧನರಾದರು.
ಕೋರೋನಾ ಪಾಸಿಟಿವ್ ಸೋಂಕಿನ ಹಿನ್ನಲೆಯಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ನಿಧರಾಗಿದ್ದಾರೆ.
ಈ ಹಿಂದೆ ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಅವರು ಗ್ರಾಮದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಾಂಗೇಸ್ ಪಕ್ಷದ ನಾಯಕರಾಗಿದ್ದರೂ ಪಕ್ಷಭೇದವನ್ನು ದೂರವಿಟ್ಟು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೋನ್ಸೆ ಪಂಚಾಯತ್’ನ ಸರ್ವಸದಸ್ಯರು ಅಭಿವೃದ್ಧಿ ಕಾರ್ಯದಲ್ಲಿ ಒಂದಾಗುವಂತೆ ಮಾಡಿದ್ದರು.
ಒರ್ವ ಉತ್ತಮ ಕರಾಟೆಪಟು ಆಗಿದ್ದ ಅವರು ರಾಜ್ಯ ಕರಾಟೆ ಸಂಘದ ಪದಾಧಿಕಾರಿಯೂ ಆಗಿದ್ದರು. ಕ್ರಿಡಾಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವಕ್ಕೆ ಕೂಡ ಪಾತ್ರರಾಗಿದ್ದರು.