ಉಡುಪಿ ಜಿಲ್ಲೆಯವರು ಈ ಕಾಲ್ ಸೆಂಟರ್ ಗೆ ಕರೆ ಮಾಡಿ ಕೋವಿಡ್ ಚಿಕಿತ್ಸೆ ಪಡೆಯಬಹುದು

ಉಡುಪಿ : ಜಿಲ್ಲೆಯ ನಾಗರೀಕರು ಕೋವಿಡ್-19 ರೋಗಕ್ಕೆ ತುತ್ತಾದವರು ರಾಜ್ಯ ಸರಕಾರದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಉಡುಪಿ ತಾಲೂಕಿನ ಕಾಲ್‌ಸೆಂಟರ್ ನಂಬರ್ 9663950222/9663957222, ಕುಂದಾಪುರ ತಾಲೂಕಿನ ಕಾಲ್‌ಸೆಂಟರ್ ನಂಬರ್ 6363862122/7483984733 ಹಾಗೂ ಕಾರ್ಕಳ ತಾಲೂಕಿನ ಕಾಲ್‌ಸೆಂಟರ್ ನಂಬರ್ 7411323408/7676227624 ಗೆ ಕರೆ ಮಾಡಿ, ಕಾಲ್‌ಸೆಂಟರ್‌ನ ವೈದ್ಯರು ಸೋಂಕಿತರ ತೊಂದರೆಗಳನ್ನು ತಿಳಿಸಿದ್ದಲ್ಲಿ, ಸೂಕ್ತ ಸೌಲಭ್ಯವಿರುವ ಆಸ್ಪತ್ರೆಯನ್ನು ಹಾಗೂ ಆಂಬುಲೆನ್ಸ್ನ ವ್ಯವಸ್ಥೆ ಇಲ್ಲಿರುತ್ತದೆ.
ಕೋವಿಡ್ ರೋಗಿಗಳು ಕಾಲ್‌ಸೆಂಟರ್‌ನ ವೈದ್ಯಾಧಿಕಾರಿಗಳ ಸೂಚನೆ ಪಡೆಯದೇ ಖಾಸಗಿ ಆಸ್ಪತ್ರೆಗೆ ಇಲ್ಲವೇ, ನರ್ಸಿಂಗ್ ಹೋಮ್‌ಗೆ ದಾಖಲಾದರೆ ಅಂತಹ ರೋಗಿಗಳಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಉಚಿತ ಸೌಲಭ್ಯವನ್ನು ಸರಕಾರದ ನಿಯಮದಂತೆ ನೀಡಲು ಸಾಧ್ಯವಾಗುವುದಿಲ್ಲ.
ಜಿಲ್ಲೆಯ ಜಿಲ್ಲಾಸ್ಪತ್ರೆ, ಕುಂದಾಪುರ ಮತ್ತು ಕಾರ್ಕಳ ತಾಲೂಕು ಆಸ್ಪತ್ರೆ ಹಾಗೂ 19 ಖಾಸಗಿ ಆಸ್ಪತ್ರೆಗಳು ಅಥವಾ ನರ್ಸಿಂಗ್ ಹೋಮ್‌ಗಳು ಕೊರೋನಾ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದು, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯವನ್ನು ಪಡೆಯಲು ಇಚ್ಚಿಸದ ಸೋಂಕಿತರು ಖಾಸಗಿ ಆಸ್ಪತ್ರೆಗೆ ಅಥವಾ ನರ್ಸಿಂಗ್ ಹೋಮ್‌ಗೆ ದಾಖಲಾದರೆ, ಚಿಕಿತ್ಸೆಯ ಪೂರ್ಣವೆಚ್ಚವನ್ನು ಅವರೇ ಭರಿಸುವ ಕುರಿತು ಸಮ್ಮತಿಯನ್ನು ಲಿಖಿತವಾಗಿ ನೀಡಬೇಕು.
ಕಾಲ್‌ಸೆಂಟರ್‌ನಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಕಾಲ್ ಸೆಂಟರ್‌ಗಳನ್ನು ಅಥವಾ ಸ್ಥಳೀಯ ಆರೋಗ್ಯಾಧಿಕಾರಿ, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದು.
ಕೋವಿಡ್ ಸೋಂಕಿತರು ಮೇಲಿನ ಚಿಕಿತ್ಸಾ ಸೌಲಭ್ಯಗಳಲ್ಲದೇ ಆಯಾ ತಾಲೂಕುಗಳಲ್ಲಿರುವ ಕೊರೋನಾ ಆರೈಕೆ ಕೇಂದ್ರಗಳಲ್ಲೂ ಸೌಲಭ್ಯಗಳನ್ನು ಪಡೆಯಬಹುದು ಹಾಗೂ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ನೊಂದಾವಣೆ ಆದ ಖಾಸಗಿ ಆಸ್ಪತ್ರೆ ಅಥವಾ ನರ್ಸಿಂಗ್ ಹೋಮ್‌ಗಳಲ್ಲೂ ತಮ್ಮ ಸ್ವಂತ ಖರ್ಚಿನಲ್ಲಿ ಚಿಕಿತ್ಸೆಯನ್ನು ಪಡೆಯಬಹುದು