ಕರಾವಳಿ

ಬ್ಲಾಕ್ ಫಂಗಸ್ ಕಾಯಿಲೆಗೆ ಚಿಕಿತ್ಸೆ ಕಂಡುಹಿಡಿದ ಕರಾವಳಿ ಮೂಲದ ಸಂಶೋಧಕ ಶ್ರೀಕಾಂತ ಪೈ

ಕೋವಿಡ್ 2ನೇ ಅಲೆಯಲ್ಲಿ ತತ್ತರಿಸುವ ದೇಶವಾಸಿಗಳನ್ನು ಇನ್ನಿಲದಂತೆ ಕಾಡುತ್ತಿರುವ ಬ್ಲಾಕ್ ಫಂಗಸ್ ಕಾಯಿಲೆಯನ್ನು ವಾಸಿ ಮಾಡಲು ಬಳಸುತ್ತಿರುವ ಔಷಧಿಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದು ಲಿಪೊಸೊಮನ್ ಆ್ಯಂಪೊಟೆರಿಸಿನ್ ಬಿ ಎನ್ನುವ ಔಷಧಿ. ಈ ಔಷಧಿಯನ್ನು ಕಂಡು ಹಿಡಿಯಲು ಶ್ರಮ ಪಟ್ಟಿರುವವರು ಕರಾವಳಿಯವರು.

ಭಾರತ ಸೀರಮ್ಸ್ ಎಂಡ್ ವ್ಯಾಕ್ಸಿನ್ಸ್ ಲಿಮಿಟೆಡ್ ಕಂಪೆನಿಯ ಸಂಶೋಧಕ ತಂಡದ ನೇತೃತ್ವ ವಹಿಸಿದವರು ಕರಾವಳಿಯ ಕನ್ನಡಿಗರಾದ ಬಾಂಡ್ಯ ಶ್ರೀಕಾಂತ ಪೈ. ಇವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಗಂಗೊಳ್ಳಿ ಮೂಲದವರು. ಗಂಗೊಳ್ಳಿ ಹಾಗೂ ಕುಂದಾಪುರದಲ್ಲಿ ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಮುಗಿಸಿ, ಬೆಂಗಳೂರಿನಲ್ಲಿ 1975ರಲ್ಲಿ ಬಿ. ಫಾರ್ಮ ಮತ್ತು ಮಣಿಪಾಲದಲ್ಲಿ 1977ರಲ್ಲಿ ಎಂ. ಫಾರ್ಮ ಶಿಕ್ಷಣ ಪಡೆದುಕೊಂಡು, ಉದ್ಯೋಗಕ್ಕಾಗಿ ಮುಂಬೈನಲ್ಲಿರುವ ಭಾರತ್ ಸೀರಮ್ಸ್ ಎಂಡ್ ವ್ಯಾಕ್ಸಿನ್ಸ್ ಲಿಮಿಟೆಡ್ ಕಂಪೆನಿ ಸೇರಿದ್ದರು.

ವ್ಯಾಪಕ ಸಂಶೋಧನಾ ಕಾರ್ಯಗಳ ಬಳಿಕ ಭಾರತ್ ಸೀರಮ್ಸ್ ಮತ್ತು ವ್ಯಾಕ್ಸಿನ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಆಂಬಿಸೋಮ್ ಔಷಧಿಯ ಸಾಮಾನ್ಯ ಆವೃತ್ತಿಯನ್ನು 2012ರಲ್ಲಿ ಗಂಗೊಳ್ಳಿ ಮೂಲದ ಬಾಂಡ್ಯ ಶ್ರೀಕಾಂತ್ ಪೈ ಮತ್ತು ಅವರ ತಂಡವು ಅಭಿವೃದ್ಧಿಪಡಿಸಿರುವುದು ಎಲ್ಲರ ಗಮನ ಸೆಳೆದಿದೆ.

ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಔಷಧದ ದಕ್ಷತೆ ಮತ್ತು ವಿಷತ್ವವನ್ನು ವ್ಯಾಪಕವಾಗಿ ಅಧ್ಯಯನ ಮಾಡಲಾಗಿದೆ ಮತ್ತು ಕಪ್ಪು ಶಿಲೀಂಧ್ರ ಸೋಂಕುಗಳಿಗೆ (ಬ್ಲ್ಯಾಕ್ ಫಂಗಸ್) ಚಿಕಿತ್ಸೆ ನೀಡಲು ವೈದ್ಯರು ಸೂಚಿಸುವ ಪ್ರಮುಖ ಉತ್ಪನ್ನವಾಗಿದೆ. ಸಾಂಪ್ರದಾಯಿಕ ಉತ್ಪನ್ನಕ್ಕೆ ಹೋಲಿಸಿದರೆ ಪ್ರಾಣಿಗಳ ಅಧ್ಯಯನದಲ್ಲಿ 20ಕ್ಕೂ ಹೆಚ್ಚು ಬಾರಿ ಸುರಕ್ಷತಾ ಪ್ರೊಫೈಲ್ ಹೊಂದಿರುವ ಆಂಫೊಟೆರಿಸಿನ್ ಬಿ ಲಿಪಿಡ್ ಕಾಂಪ್ಲೆಕ್ಸ್ (ಅಬೆಲ್ಸೆಟ್) ಎನ್ನುವ ಔಷಧಿಯನ್ನು ಸಹ ಅದೇ ತಂಡವು ಅಭಿವೃದ್ಧಿಪಡಿಸಿದೆ ಮತ್ತು ಸುಮಾರು 3000-3500 ರೂಪಾಯಿ ವೆಚ್ಚದಲ್ಲಿ ಲಭ್ಯವಿದೆ. ಆಂಫೊಟೆರಿಸಿನ್ ಬಿ ಎಮಲ್ಷನ್ ಎಂಬ ಔಷಧಿ ಅಗ್ಗದ ದರದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಇದಕ್ಕಾಗಿ ಪೇಟೆಂಟ್ ಪಡೆಯಲಾಗಿದೆ.

ಒಟ್ಟಾರೆಯಾಗಿ ಭಾರತ್ ಸೀರಮ್ಸ್ ಮತ್ತು ವ್ಯಾಕ್ಸಿನ್ ಲಿಮಿಟೆಡ್ ಸಂಸ್ಥೆಯ ಬಿ. ಶ್ರೀಕಾಂತ ಪೈ ನೇತೃತ್ವದ ಒಂದೇ ತಂಡವು ವಿಭಿನ್ನ ಪರಿಣಾಮಕಾರಿತ್ವ, ಸುರಕ್ಷತೆ ಮತ್ತು ವಿಷತ್ವ ಪ್ರೊಫೈಲ್‌ಗಳನ್ನು ಹೊಂದಿರುವ ಮೇಲೆ 4 ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದು, ಇದೀಗ ಈ ಉತ್ಪನ್ನಗಳು ರೋಗಿಗಳಿಗೆ ವರದಾನವಾಗಿ ಪರಿಣಮಿಸಿದೆ. ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಯಾವ ಉತ್ಪನ್ನ ಎನ್ನುವುದನ್ನು ವೈದ್ಯಕೀಯ ತಜ್ಞರೇ ನಿರ್ಧರಿಸುತ್ತಾರೆ.

ಭಾರತ್ ಸೀರಮ್ಸ್ ಎಂಡ್ ವ್ಯಾಕ್ಸಿನ್ಸ್ ಕಂಪೆನಿಯಿಂದ ನಿವೃತ್ತರಾದ ಬಳಿಕ ಬಿ.ಶ್ರೀಕಾಂತ ಪೈ ಸದ್ಯ ಮುಂಬೈನಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದು, ಫ್ರೀಲ್ಯಾನ್ಸ್ ಕನ್ಸಲ್ಟೆಂಟ್ ಆಗಿ ದುಡಿಯುತ್ತಿದ್ದಾರೆ. ಫಾರ್ಮುಲೇಶನ್ಸ್ನಲ್ಲಿ ಪೇಟೆಂಟ್ ಪಡೆದ 16 ಸಂಶೋಧನೆಗಳನ್ನು ನಡೆಸಿರುವ ಇವರು ಈ ಕ್ಷೇತ್ರದಲ್ಲಿ ಸುಧೀರ್ಘ 35 ವರ್ಷ ಅನುಭವ ಹೊಂದಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker