ರಾಷ್ಟ್ರೀಯ
ಅಂತರ್ಧರ್ಮೀಯ ವಿವಾಹವಾದ ಕೆಲವೇ ತಿಂಗಳಲ್ಲಿ ದುರಂತ ಅಂತ್ಯ ಕಂಡ ಯುವತಿ !

ಹೈದರಾಬಾದ್ (26.05.2021) : ಧರ್ಮವನ್ನು ಮೀರಿ ಇಷ್ಟಪಟ್ಟವನೊಂದಿಗೆ ಮದುವೆಯಾದ ಯುವತಿಯೊಬ್ಬಳು ಈಗ ದುರಂತ ಅಂತ್ಯಕಂಡಿದ್ದಾಳೆ.
ಅತ್ತೆಯ ಕಿರುಕುಳವನ್ನು ತಾಳಲಾರದೇ ಮದುವೆಯಾದ ಕೆಲವೇ ದಿವಸಗಳಲ್ಲಿ ಯುವತಿ ಮೃತಪಟ್ಟಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಪಟ್ಟಣದಲ್ಲಿ ಜರುಗಿದೆ. ಮೃತ ಯುವತಿಯ ಹೆಸರು ಶ್ರಾವಂತಿ (19). ಈಕೆ ವಂಬೆ ಕಾಲನಿಯ ನಿವಾಸಿ. ಕ್ಲರ್ಕ್ ಉದ್ಯೋಗಿ ಸಲ್ಮಾನ್ ಎಂಬಾತನ ಪ್ರೀತಿಯಲ್ಲಿ ಬಿದ್ದಿದ್ದಳು. ಇದೇ ವರ್ಷ ಜನವರಿ 7ರಂದು ದರ್ಗಾದಲ್ಲಿ ಇಬ್ಬರು ಮದುವೆ ಆಗಿದ್ದರು.
ಮದುವೆಯಾದ ಬಳಿಕ ತನ್ನ ಹೆಸರನ್ನು ಸಮೀರಾ ಎಂದು ಬದಲಾಯಿಸಿಕೊಂಡಿದ್ದಳು. ಕಳೆದ ಎರಡು ತಿಂಗಳಿಂದ ಅತ್ತೆ ಮನೆಯನ್ನು ತೊರೆದು ಗಂಡನ ಜತೆ ಬೇರೆ ಮನೆಯಲ್ಲಿ ಸಮೀರಾ ವಾಸವಿದ್ದಳು.
ಮೃತಳ ಕತ್ತಿನ ಭಾಗದಲ್ಲಿ ಗಾಯದ ಗುರುತುಗಳು ಇರುವುದರಿಂದ ಆಕೆಯ ಪಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅತ್ತೆ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪವೂ ಇದೆ.