
ಉಡುಪಿ: ಕರೋನಾ 19 ಹಿನ್ನಲೆಯಲ್ಲಿ ಶಾಸಕರಾದ ಕೆ . ರಘುಪತಿ ಭಟ್ ಅವರ ಮಾರ್ಗದರ್ಶನದಲ್ಲಿ: ಉಡುಪಿ ನಗರ ಬಿಜೆಪಿ ಅಧ್ಯಕ್ಷ ರಾದ ಮಹೇಶ್ ಠಾಕೂರ್ ಅವರ ನೇತೃತ್ವದಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಸೀಲ್ ಡೌನ್ ಆದ ಮನೆಗಳಿಗೆ ಅಗತ್ಯ ದಿನಸಿ ವಸ್ತುಗಳ ಪೂರೈಕೆ ಹಾಗೂ ಹಿರಿಯ ನಾಗರಿಕರಿಗೆ ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ನಗರ ಯುವಮೋರ್ಚಾ ಅಧ್ಯಕ್ಷರಾದ ರೋಶನ್ ಶೆಟ್ಟಿ ಅವರ ತಂಡ ಮಾಡಲಿದೆ ಎಂದು ಉಡುಪಿ ನಗರ ಬಿಜೆಪಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಅಗತ್ಯ ವಸ್ತುಗಳು ಮತ್ತು ಔಷಧಿಗಳು ಬೇಕಾದಲ್ಲಿ 1ದಿನ ಮುಂಚಿತವಾಗಿ ಸಹಾಯವಾಣಿ 7795075034 ಮತ್ತು 8310450865 ಕರೆ ಮಾಡಿ ತಿಳಿಸತಕ್ಕದ್ದು ಮತ್ತು ಮನೆಗೆ ವಸ್ತುಗಳು ತಲುಪಿದ ನಂತರ ಮೊತ್ತವನ್ನು ಪಾವತಿಸತಕ್ಕದ್ದು.