ರಾಜ್ಯ
ಆಳ ಸಮುದ್ರದಲ್ಲಿ ಅಪಾಯದಲ್ಲಿದ್ದ 10 ಮೀನುಗಾರರು : ಇಂಡಿಯನ್ ಕೋಸ್ಟ್ ಗಾರ್ಡ್ ಪಡೆಯಿಂದ ರಕ್ಷಣೆ…!

ಮಂಗಳೂರು : ಆಳ ಸಮುದ್ರದಲ್ಲಿ ಅಪಾಯದಲ್ಲಿದ್ದ 10 ಮೀನುಗಾರರನ್ನು ಕೊಸ್ಟ್ ಗಾರ್ಡ್ ಕಾರ್ಯಚರಣೆ ನಡೆಸಿ ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಅರಬ್ಬೀ ಸಮುದ್ರ ಮಧ್ಯೆ ಇಂಜಿನ್ ಕೆಟ್ಟು ಅಪಾಯಕ್ಕೀಡಾಗಿದ್ದ ತಮಿಳುನಾಡು ಮೂಲದ ಹತ್ತು ಮಂದಿ ಮೀನುಗಾರರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ರಕ್ಷಿಸಿದೆ ಎನ್ನಲಾಗಿದೆ.
ಮಂಗಳೂರಿನಿಂದ 20 ನಾಟಿಕಲ್ ಮೈಲು ದೂರದಲ್ಲಿ ಇಂಜಿನ್ ಕೆಟ್ಟು ಅಪಾಯಕ್ಕೆ ಬೋಟ್ ಸಿಲುಕಿತ್ತು.ತಮಿಳುನಾಡು ಮೂಲದ ಲಾರ್ಡ್ ಆಫ್ ಓಶಿಯನ್ ಹೆಸರಿನ ಬೋಟ್ ಆಗಿತ್ತು.
ಚಂಡಮಾರುತದಿಂದ ತಪ್ಪಿಸಿಕೊಳ್ಳಲು ಮೇ 14ರಂದು ಗುಜರಾತ್ ಕರಾವಳಿಯ ಪೋರ್ ಬಂದರಿಗೆ ತೆರಳಿದ್ದ ಬೋಟ್,
ತಮಿಳುನಾಡಿಗೆ ಹಿಂದಿರುಗುತಿದ್ದಾಗ ಆಳ ಸಮುದ್ರದಲ್ಲಿ ಬೋಟ್ ಕೆಟ್ಟು ನಿಂತಿತ್ತು ಎನ್ನಲಾಗಿದೆ.
ಇಂಡಿಯನ್ ಕೋಸ್ಟ್ ಗಾರ್ಡ್ ಪಡೆಯು ಐಸಿಜಿಎಸ್ ರಾಜದೂತ್ ಹಡಗು ಮಾಹಿತಿ ಪಡೆದು ಕಾರ್ಯಚರಣೆ ನಡೆಸಿ ಮೀನುಗಾರರನ್ನು ರಕ್ಷಿಸಿದ್ದಾರೆ.