ಕರಾವಳಿ
ಉಡುಪಿ: ನಾಳೆಯಿಂದ (ಮೇ 28) ಬ್ಯಾಂಕ್ ಗಳ ವ್ಯವಹಾರದ ಸಮಯದಲ್ಲಿ ಬದಲಾವಣೆ

ಉಡುಪಿ: ಸಾರ್ವಜನಿಕರಿಗೆ ಬ್ಯಾಂಕಿಂಗ್ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಾಗೂ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಾಳೆಯಿಂದ (ಮೇ 28) ಜೂನ್ 6ರ ವರೆಗೆ ಬ್ಯಾಂಕ್ ಗಳ ವ್ಯವಹಾರ ಅವಧಿಯನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಕಚೇರಿಯ ಕರ್ತವ್ಯದ ಅವಧಿಯನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಿಗದಿಗೊಳಿಸಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.