
ಮಂಗಳೂರು : ಕೊರೊನ ಸಮಯ ಆರ್ಥಿಕ ಹಿಂಜರಿತದ ನಡುವೆ ಕರಾವಳಿಯ ಬ್ಯಾಂಕಾದ ಕರ್ನಾಟಕ ಬ್ಯಾಂಕ್ ದಾಖಲೆಯ 483 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ.
ಕರ್ನಾಟಕ ಬ್ಯಾಂಕ್ ಕಳೆದ ಸಾಲಿನಲ್ಲಿ 431.78 ಕೋಟಿ ನಿವ್ವಳ ಲಾಭ ಗಳಿಸಿತ್ತು. ಪ್ರಸಕ್ತ ವರ್ಷ 11.76 ಬೆಳವಣಿಗೆ ಸಾಧಿಸಿದೆ. ಆ ಮೂಲಕ ಅಗ್ರಗಣ್ಯ ಬ್ಯಾಂಕ್ ಗಳಲ್ಲಿ ತನ್ನ ಛಾಪು ಮೂಡಿಸಿದೆ.
ಬ್ಯಾಂಕ್ ನ ಉದ್ಯೋಗಿಗಳು ಕೋವಿಡ್ ಕಾರಣದಿಂದ ಮೃತ ಪಟ್ಟರೆ ಅವರ ಕುಟುಂಬದವರಿಗೆ 20 ಲಕ್ಷ ಹಾಗೂ ಅವರ ಕುಟುಂಬದ ಅರ್ಹ ಅಭ್ಯರ್ಥಿಗಳಿಗೆ ಅನುಕಂಪದ ನೆಲೆಯಲ್ಲಿ ಕರ್ಣಾಟಕ ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ ಮಾಡಿಕೊಡಲಾಗುತ್ತದೆ ಬ್ಯಾಂಕ್ ನ ಉದ್ಯೋಗಿಗಳು ಕೋವಿಡ್ ಕಾರಣದಿಂದ ಮೃತ ಪಟ್ಟರೆ ಅವರ ಕುಟುಂಬದವರಿಗೆ 20 ಲಕ್ಷ ಹಾಗೂ ಅವರ ಕುಟುಂಬದ ಅರ್ಹ ಅಭ್ಯರ್ಥಿಗಳಿಗೆ ಅನುಕಂಪದ ನೆಲೆಯಲ್ಲಿ ಕರ್ಣಾಟಕ ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ ಮಾಡಿಕೊಡಲಾಗುತ್ತದೆ.