
ಮಣಿಪಾಲ: ಇಂದು ಮಣಿಪಾಲದಲ್ಲಿ ಸ್ವತಃ ಜಿಲ್ಲಾಧಿಕಾರಿ ಅನಗತ್ಯ ಒಡಾಟದ ಆರೋಪದಲ್ಲಿ ಸುಮಾರು 35 ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.
ಮಣಿಪಾಲ ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ ಮತ್ತು ಸಬ್ ಇನ್ಸ್‌ಪೆಕ್ಟರ್ ರಾಜ್ ಶೇಖರ್ ವಂದಲಿ ಅವರು ಅನಗತ್ಯವಾಗಿ ಓಡಾಟ ನಡೆಸುತ್ತಿರುವ 25 ರಿಂದ 35 ವಾಹನಗಳನ್ನು ಸೀಝ್ ಮಾಡಿದ್ದಾರೆ.ಹಾಗೂ 7 ರಿಂದ 9 ವಾಹನಗಳ ಮೇಲೆ ಕೇಸು ದಾಖಲಿಸಿ 20 ಸಾವಿರ ರೂಪಾಯಿ ದಂಡ ಹಾಕಿದ್ದಾರೆ.
ಜೂನ್ 7 ವರೆಗೆ ಲಾಕ್’ಡೌನ್ ಮುಂದುವರಿದಿದ್ದು ಜಿಲ್ಲೆಯಲ್ಲಿ ಹತ್ತು ಗಂಟೆಯ ನಂತರ ಬೇಕಾಬಿಟ್ಟಿ ಓಡಾಡಿದರೆ ಪ್ರಕರಣ ದಾಖಲಿಸಲಾಗುತ್ತಿದೆ.