ಕರಾವಳಿ
ಕಾರ್ಕಳ: ಬಿಳಿ ಬೆಂಡೆ ಬೀಜ ವಿತರಣೆಯ ಬೃಹತ್ ಅಭಿಯಾನಕ್ಕೆ ಚಾಲನೆ
ಕಾರ್ಕಳದ ಶಾಸಕರ ಹೊಸ ಕಲ್ಪನೆಯ ಕಾರ್ಲ ಬೆಂಡೆ ಎಂಬ ತರಕಾರಿ ಬೆಳೆಯುವ ಹೊಸ ಅಭಿಯಾನಕ್ಕೆ ಕಾರ್ಕಳ ಕ್ಷೇತ್ರದಾದ್ಯಂತ ಚಾಲನೆ ನೀಡಲಾಯಿತು.
ಕಾರ್ಕಳ ಬಿಳಿ ಬೆಂಡೆಯ ಬೀಜಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಚ್ಚಿನ ಮನೆಗಳಲ್ಲಿ ಬೆಳೆಸುವ ಯೋಜನೆ ಇದಾಗಿದ್ದು ಮಂಗಳವಾರದಂದು ಬೈಲೂರು ಶಕ್ತಿಕೇಂದ್ರ ವ್ಯಾಪ್ತಿಯ ಪಂಚಾಯತುಗಳಿಗೆ ಪಂಚಾಯತ್ ಅಧ್ಯಕ್ಷರುಗಳ ಮೂಲಕ ಬೆಂಡೆ ಬೀಜವನ್ನು ವಿತರಿಸಲಾಯಿತು.
“ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸುವ ದೃಷ್ಠಿಕೋನದೊಂದಿಗೆ ಕಾರ್ಕಳದ ಬ್ರಾಂಡ್ ಆಗಿ ಬಿಳಿ ಬೆಂಡೆಯನ್ನು ಬೆಳೆಸುವ ಮತ್ತು ವ್ಯಾಪಕವಾಗಿ ಪರಿಚಯಿಸುವ ಸಲುವಾಗಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾರಿನಾಂಶ ಮತ್ತು ಉತ್ತಮ ಪೌಷ್ಠಿಕತೆ ಹೊಂದಿರುವ ಈ ಸಸ್ಯದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ” ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಣಿರಾಜ ಶೆಟ್ಟಿಯವರು ತುಳುನಾಡಿನ ಸಾಂಪ್ರಾದಾಯಿಕ ಸಸ್ಯ ತರಕಾರಿಗಳ ಬೆಳೆಯ ಬಗ್ಗೆ ಮಾಹಿತಿ ನೀಡಿದರು.ಕ್ಷೇತ್ರಾಧ್ಯಕ್ಷರಾದ ಮಹಾವೀರ ಹೆಗ್ಡೆ ಪ್ರಸ್ಥಾನವೆಗೈದರು.
ಕ್ಷೇತ್ರ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಿತ್ ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಮಂಡಲ ಉಪಾಧ್ಯಕ್ಷ ಅಂತೋನಿ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.