ಪ್ರಪ್ರಥಮ ಮಹಿಳಾ ಕೋವಿಡ್ ಕೇರ್ ಉದ್ಘಾಟನೆ
ಮೈಸೂರು: ಗೋಕುಲಂ 2ನೇ ಹಂತದಲ್ಲಿರುವ ಇಂಟರ್‌ನ್ಯಾಷನಲ್ ಯೂತ್ ಹಾಸ್ಟೆಲ್‌ನಲ್ಲಿ ಮಹಿಳೆಯರಿಗೆ ವಿಶೇಷ ಕೋವಿಡ್ ಸೆಂಟರನ್ನು ಮಂಗಳವಾರ ಸಂಜೆ ಉದ್ಘಾಟಿಸಲಾಯಿತು.ಸ್ಥಳೀಯ ಶಾಸಕ ಎಲ್.ನಾಗೇಂದ್ರ, ಪಾಲಿಕೆಸದಸ್ಯೆ ಭಾಗ್ಯ ಮಾದೇಶ್, ವಿಧಾನ ಪರಿಷತ್ ಮಾಜಿಸದಸ್ಯ ಮಾದೇಗೌಡ, ಜಿಲ್ಲಾಧಿಕಾರಿ ರೋಹಿಣಿಸಿಂಧೂರಿ ಕೋವಿಡ್‌ಕೇರ್‌ಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ನಗರದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಆರಂಭಿಸಿದ ಮೊದಲ ಕೋವಿಡ್ ಕೇರ್ ಸೆಂಟರ್ ಇದಾಗಿದ್ದು,ಇಲ್ಲಿ 64 ಹಾಸಿಗೆಗಳ ಸೌಲಭ್ಯವಿದೆ. ವಿವಿ ಪುರಂಹೆರಿಗೆ ಆಸ್ಪತ್ರೆಯು ಈ ಕೇಂದ್ರದ ಉಸ್ತುವಾರಿ ಮತ್ತು ವೈದ್ಯಕೀಯ ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಆಶಾಕಿರಣ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರು ಸಹ ಇಲ್ಲಿ ಸೇವೆ ಸಲ್ಲಿಸುವರು ಎಂದರು.
ಮೈಸೂರು ಇನ್ನೂ 3 ಕೋವಿಡ್ ಕೇರ್ ತೆರೆಯಲಾಗುವುದು. ಚಾಮರಾಜ ಕ್ಷೇತ್ರದ ಸರ್ಕಾರಿಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 50 ಹಾಸಿಗೆಗಳ ಸಿಸಿಸಿ (ಕೋವಿಡ್‌ಕೇರ್ ಸೆಂಟರ್), ಎನ್.ಆರ್.ಕ್ಷೇತ್ರದ ಫರೂಕಿಯಫಾರ್ಮಸಿ ಕಾಲೇಜಿನಲ್ಲಿ 200 ಹಾಸಿಗೆಗಳ ಸಿಸಿಸಿಮತ್ತು ಕೆ.ಆರ್.ಕ್ಷೇತ್ರದ ಆರ್‌ಎಂಸಿ ಎದುರು ಇರುವ ಮೆಟ್ರಿಕ್ ನಂತರದ ಬಿಸಿಎಂ ಮಹಿಳಾವಿದ್ಯಾರ್ಥಿ ನಿಲಯದಲ್ಲಿ 300 ಹಾಸಿಗೆಗಳ ಸಿಸಿಸಿಮಾಡಲಾಗುತ್ತಿದೆ ಎಂದರು.
ಮೈಸೂರಿನ ಜನತೆಗಾಗಿ ಈ 3 ಸಿಸಿಸಿಗಳನ್ನು ಮಾಡಲಾಗಿದೆ. ಎಲ್ಲಾ ಸಿಸಿಸಿಗಳಲ್ಲೂ ಉಚಿತ ಸೇವೆ ದೊರೆಯಲಿದೆ.ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿಈ ವರೆಗೆ 19 ಸಿಸಿಸಿಗಳನ್ನು ತೆರೆಯಲಾಗಿದೆ. ಈ ಸಿಸಿಸಿಗಳಲ್ಲಿ ಮಹಿಳೆಯರು ಮತ್ತು ಪುರುಷರು ಇದ್ದಾರೆ. 1700 ಜನ ಈ ಸಿಸಿಸಿಗಳಲ್ಲಿ ಇದ್ದಾರೆ.ಮೈಸೂರು ನಗರದಲ್ಲಿ 8535 ಮತ್ತು ಗ್ರಾಮೀಣ ಪ್ರದೇಶದಲ್ಲಿ 6550 ಸಕ್ರಿಯ ಪ್ರಕರಣಗಳು ಇದ್ದು, ಮೈಸೂರು ನಗರದಲ್ಲಿ ವಿಶೇಷವಾಗಿ 3 ಸಿಸಿಸಿಮತ್ತು 1 ಮಹಿಳಾ ಸಿಸಿಸಿ ಆರಂಭಿಸಲಾಗಿದೆ.ಇದರಿಂದ ವಿವಿಧ ಕಾರಣಕ್ಕಾಗಿ ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಸಾಧ್ಯವಾಗದವರಿಗೆ ತುಂಬಾ ಅನುಕೂಲವಾಗಲಿದೆ ಎಂದರು.