ರಾಷ್ಟ್ರೀಯ

SBI ಬ್ಯಾಂಕ್ ನ ಸೇವೆಯ ಸಮಯದಲ್ಲಿ ಬದಲಾವಣೆ

ನವದೆಹಲಿ: ಕೊರೊನಾ ವೈರಸ್ ನ ಎರಡನೇ ಅಲೆ ಕ್ರಮೇಣ ಕಡಿಮೆಯಾಗುತ್ತಿದೆ. ಹಲವು ರಾಜ್ಯಗಳು ಜಾರಿಗೊಳಿಸಿದ್ದ ನಿರ್ಬಂಧಗಳಲ್ಲಿ ಸಡಿಲಿಕೆಯನ್ನು ತರುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ. ಈ ಮಧ್ಯೆ ಸಾರ್ವಜನಿಕ ವಲಯದ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ ಕೂಡ ತನ್ನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಈ ಮೊದಲು SBI ಶಾಖೆಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದವು. ಇದೀಗ ಈ ಅವಧಿಯನ್ನು 2 ಗಂಟೆಗಳವರೆಗೆ ಹೆಚ್ಚಿಸಲಾಗಿದ್ದು, ಇದೀಗ ಬ್ಯಾಂಕ್ ಶಾಖೆಗಳು ಸಂಜೆ 4ರವರೆಗೆ ತೆರೆದಿರಲಿವೆ.

ಕೊರೊನಾದ ಹೆಚ್ಚುತ್ತಿರುವ ಪ್ರಕರಣಗಳ ನಡುವೆ ಬ್ಯಾಂಕ್ ತನ್ನ ಕೆಲಸದ ವೇಳೆಯಲ್ಲಿ ಕಡಿತ ಮಾಡಿತ್ತು. ಆದೆ, ಇದೀಗ ಕೊರೊನಾ ನಿತ್ಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣ, ಬ್ಯಾಂಕ್ ತನ್ನ ಕೆಲಸದ ಅವಧಿಯಲ್ಲಿ ಎರಡು ಗಂಟೆಗಳನ್ನು ಹೆಚ್ಚಿಸಿರುವ ಮಾಹಿತಿಯನ್ನು ತನ್ನ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದೆ. ಜೂನ್ 1, 2021ರಿಂದ ನಮ್ಮಎಲ್ಲಾ ಬ್ರಾಂಚ್ ಗಳು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತೆರೆದಿರಲಿವೆ ಎಂದು ಟ್ವಿಟ್ ನಲ್ಲಿ ಬರೆದುಕೊಂಡಿದೆ.

ಇದಕ್ಕೂ ಮೊದಲು SBI ತನ್ನ ಗ್ರಾಹಕರಿಗೆ ಅಧಿಸೂಚನೆ ಜಾರಿಗೊಳಿಸಿ, ಕ್ಯಾಶ್ ಹಿಂಪಡೆತದ ನೂತನ ನಿಯಮಗಳ ಕುರಿತು ಮಾಹಿತಿ ನೀಡಿತ್ತು. ಈ ನಿಯಮಗಳ ಅನುಸಾರ, ನಾನ್-ಹೋಮ್ ಬ್ರಾಂಚ್ ಗಳಲ್ಲಿ ನಗದು ಹಿಂಪಡೆತದ ಮಿತಿಯನ್ನು ಹೆಚ್ಚಿಸಿತ್ತು. ಹೀಗಾಗಿ ಗ್ರಾಹಕರು ಒಂದು ದಿನದಲ್ಲಿ 25,000 ರೂ.ಗಳವರೆಗೆ ಹಣವನ್ನು ಹಿಂಪಡೆಯಬಹುದಾಗಿದೆ.

ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದ ಬ್ಯಾಂಕ್, ‘ಕೊರೊನಾ ಮಹಾಮಾರಿ ಕಾಲದಲ್ಲಿ ತನ್ನ ಗ್ರಾಹಕರನ್ನು ಬೆಂಬಲಿಸಲು SBI ಚೆಕ್ ಹಾಗೂ ವಿಥ್ ಡ್ರಾವಲ್ ಫಾರ್ಮ್ ಮೂಲಕ ನಾನ್ ಹೋಮ್ ಬ್ರಾಂಚ್ ಹಣ ಹಿಂಪಡೆತದ ಮಿತಿಯನ್ನು ಹೆಚ್ಚಿಸಲಾಗಿದೆ. ಹೀಗಾಗಿ ಗ್ರಾಹಕರು ತಮ್ಮ ಹತ್ತಿರದ ಬ್ರಾಂಚ್ ಗೆ ಖುದ್ದು ಭೇಟಿ ನೀಡುವ ಮೂಲಕ ಒಂದು ದಿನದಲ್ಲಿ ತಮ್ಮ ಖಾತೆಯಿಂದ ರೂ.25,000 ಹಿಂಪಡೆಯಬಹುದು’ ಎಂದು ಹೇಳಿತ್ತು.

SBI ಸೇವೆ ಇನ್ನೂ ಎರಡು ಗಂಟೆ ಹೆಚ್ಚು ಲಭಿಸಲಿದ್ದು, ಜನರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
ತಮ್ಮ ಯಾವುದೇ ಬ್ಯಾಂಕ್ ವ್ಯವಹಾರ ವಿದ್ದರೂ ಅದನ್ನು ಸಂಜೆತನಕ ವ್ಯವಹರಿಸುವುದು SBI ಅನುಮತಿ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!