ರಾಜ್ಯ
ಹಿಂದೂ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಅವಹೇಳನಕಾರಿ ಪೋಸ್ಟ್ | ಫಾರ್ವರ್ಡ್ ಮಾಡಿದ್ದ ನಾಲ್ವರ ಬಂಧನ, ಮೂಲ ಪುರುಷನಿಗಾಗಿ ಶೋಧ ಕಾರ್ಯ

ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಮತ್ತು ದುರ್ಗಾವಾಹಿನಿ ಸಂಘಟನೆಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬಜಾಲ್ ನ ನೌಶಾದ್ (27), ಸುಳ್ಯ ಕಸಬಾದ ಭವಾನಿ ಶಂಕರ್ (32), ಕಾವೂರಿನ ರವಿ ಅಲಿಯಾಸ್ ಟಿಕ್ಕಿ ರವಿ (38), ಮೂಡಿಬಿದಿರೆಯ ಧರೆಗುಡ್ಡೆಯ ಜಯ ಕುಮಾರ್ (33) ಎಂದು ಗುರುತಿಸಲಾಗಿದೆ.
ಬಂಧಿತರು ಶರಣ್ ಪಂಪ್ ವೆಲ್ ಮತ್ತು ದುರ್ಗಾವಾಹಿನಿಗೆ ಸಂಬಂಧಿಸಿದಂತೆ ಬಂದ ವಾಟ್ಸಾಪ್ ಸಂದೇಶವನ್ನು ಪರಿಶೀಲಿಸದೆ ಇತರ ಗ್ರೂಪ್ ಗಳಿಗೆ ಹಾಕಿದ್ದರು.
ಇತರ ಗ್ರೂಪ್ ಹಾಗೂ ಸ್ನೇಹಿತರಿಗೆ ರವಾನಿಸಿದ್ದರು. ಆ ನಂತರ ಅದು ವೈರಲ್ ಆಗಿ ಅನಗತ್ಯ ಟೆನ್ಶನ್ ಉಂಟು ಮಾಡಿತ್ತು.
ಇದೀಗ ಈ ಸಂದೇಶದ ಮೂಲ ಪುರುಷನನ್ನು ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ತಿಳಿಸಿದ್ದಾರೆ.