ರಾಜ್ಯ
ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆ ಬಗ್ಗೆ ಸಚಿವರ ಪತ್ರಿಕಾಗೋಷ್ಠಿ ನಾಳೆ

ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ವಿಷಯಕ್ಕೆ ಸಂಬಂಧಿಸಿ ಶುಕ್ರವಾರ ಬೆಳಿಗ್ಗೆ ಹತ್ತು ಗಂಟೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ .ಸುರೇಶ್ ಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಪ್ರಮುಖ ವಿಚಾರ ಹೇಳಲಿದ್ದಾರೆ .
ಕೊರೊನಾ ಆತಂಕದ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಇವೆರಡು ಪರೀಕ್ಷೆ ನಡೆಸಲಾಗುತ್ತದೆಯೇ? ಮುಂದೂಡಲಾಗುವುದೆ? ಅಥವಾ ರದ್ದು ಪಡಿಸಲಾಗುವುದೇ ಎಂಬ ಮಾಹಿತಿ ನೀಡಲಿದ್ದಾರೆ. ಸಿಬಿಎಸ್ ಇ ಈಗಾಗಲೇ ಎಸ್ಎಸ್ಎಲ್ಸಿ ಹಾಗೂ ಹನ್ನೆರಡನೇ ತರಗತಿ ಪರೀಕ್ಷೆ ರದ್ದು ಮಾಡಿದೆ. ಅನೇಕ ರಾಜ್ಯಗಳಲ್ಲಿ ಬೋರ್ಡ್ ಪರೀಕ್ಷೆ ರದ್ದಾಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಇವೆರಡೂ ಪರೀಕ್ಷೆ ಬಗ್ಗೆ ಸರಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಬಗ್ಗೆ ನಾಳೆಯ ಪತ್ರಿಕಾಗೋಷ್ಠಿ ಕುತೂಹಲ ಮೂಡಿಸಿದೆ.