
ನವದೆಹಲಿ: ದೇಶದಲ್ಲಿ ವಿದೇಶಿ ಕೊರೋನಾ ಲಸಿಕೆಗಳ ನಿರ್ಬಂಧಿತ ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ(ಡಿಸಿಜಿಐ) ಹಸಿರು ನಿಶಾನೆ ತೋರಿದೆ.
ಯುಎಸ್ಎಫ್ಡಿಎ ಹಾಗೂ ಇನ್ನಿತರ ದೇಶಗಳಲ್ಲಿ ಅನುಮೋದನೆ ಪಡೆದಿರುವ ವಿದೇಶಿ ಲಸಿಕೆಗಳಿಗೆ ಡಿಸಿಜಿಐ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಫೈಜರ್ ಹಾಗೂ ಮಾಡರ್ನಾದಂಥ ಲಸಿಕೆಗಳ ಬಳಕೆಗೆ ದೇಶದಲ್ಲಿ ಅನುಮತಿ ನೀಡಿದ್ದು, ಭಾರತದಲ್ಲಿ ಈಚೆಗೆ ಕೊರೊನಾ ಲಸಿಕೆಗಳಿಗೆ ಕೊರತೆ ಎದುರಾದ ಬೆನ್ನಲ್ಲೇ ಡಿಸಿಜಿಐ ಈ ನಿರ್ಧಾರ ಪ್ರಕಟಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆ ಪಟ್ಟಿಯಲ್ಲಿ ಉಲ್ಲೇಖಿಸಿದ ವಿದೇಶಿ ಕೊರೋನಾ ಲಸಿಕೆಗಳನ್ನು ತುರ್ತು ಹಾಗೂ ನಿರ್ಬಂಧಿತ ಬಳಕೆ ಮಾಡಲು ತೀರ್ಮಾನಿಸಲಾಗಿದೆ