ಸರಕಾರಿ ಸಾರಿಗೆಗೆ ಇನ್ನು ಕೆಎಸ್ಸಾರ್ಟಿಸಿ ಪದ-ಲೋಗೋವನ್ನು ಕರ್ನಾಟಕ ಬಳಸುವಂತಿಲ್ಲ!

ಸೂರತ್(03-06-2021): ಕೆಎಸ್ಸಾರ್ಟಿಸಿ ಪದ ಮತ್ತು ಲೋಗೋ ಬಗೆಗೆಗಿನ ವಿವಾದದ ತೀರ್ಪನ್ನು ಸೆಂಟ್ರಲ್ ಟ್ರೇಡ್ ಮಾರ್ಕ್ ರಿಜಿಸ್ಟರ್ ನೀಡಿದ್ದು, ಇದು ಕೇರಳದ ಅದೀಕೃತ ಸೊತ್ತು ಎಂದು ಹೇಳಿದೆ.
ಕಳೆದ 27 ವರ್ಷಗಳಿಂದ ಕೆಸ್ಸಾರ್ಟಿಸಿ ಲೋಗೋ ಮತ್ತು ಪದ ಬಳಕೆಯ ಬಗ್ಗೆ ಕಾನೂನು ಸಮರ ನಡೆಯುತ್ತಿತ್ತು. ಕೆಎಸ್ಸಾರ್ಟಿಸಿ ಕೇರಳದ ಸ್ವತ್ತಾಗಿದ್ದು, ಕರ್ನಾಟಕ ಪದ, ಲೋಗೋ, ಚಿತ್ರಗಳನ್ನು ಇನ್ನು ಮುಂದೆ ಬಳಸುವಂತಿಲ್ಲ.
ಕೇರಳ-ಕರ್ನಾಟಕದಲ್ಲೂ ಹಲವು ವರ್ಷಗಳಿಂದ ಕೆಎಸ್ಸಾರ್ಟಿಸಿ ಪದ ಬಳಕೆ ನಡೆಯುತ್ತಿತ್ತು. ಈ ಬಗ್ಗೆ ಎರಡು ರಾಜ್ಯಗಳು ಕೂಡ ಲೋಗೋ ನಮಗೆ ಸೇರಿದ್ದು ಎಂದು ವಾದವನ್ನು ಮುಂದಿರಿಸಿತ್ತು.
1948ರಲ್ಲಿ ಕರ್ನಾಟಕದಲ್ಲಿ ರಸ್ತೆ ಸೇವೆ ಆರಂಭವಾಗಿತ್ತು. ಈ ವೇಳೆ ಮೈಸೂರು ರಸ್ತೆ ಸಾರಿಗೆ ನಿಗಮ ಎಂದು ಕರೆಯಲಾಗಿತ್ತು. ಆ ಬಳಿಕ 1973ರಲ್ಲಿ ಕರ್ನಾಟಕ ನಾಮಕರಣದ ಬಳಿಕ ಕರ್ನಾಟಕ ರಸ್ತೆ ಸಾರಿಗೆ ನಿಗಮ ಎಂದು ಮರುನಾಮಕರಣ ಮಾಡಲಾಗಿತ್ತು. ಕೇರಳ ಸಲ್ಲಿಸಿದ ವಾದದ ಪ್ರಕಾರ ಕರ್ನಾಟಕಕ್ಕಿಂತ 10ವರ್ಷ ಮೊದಲೇ ಕೇರಳ ತನ್ನ ರಾಜ್ಯದ ಸಾರಿಗೆ ಸೇವೆಗೆ ಕೆಎಸ್ಸಾರ್ಟಿಸಿ ಎಂದು ನಾಮಕರಣ ಮಾಡಿತ್ತು.
ಟ್ರೇಡ್ ಮಾರ್ಕ್ ಅಥಾರಿಟಿ ಆಫ್ ಇಂಡಿಯಾದ ಈ ಆದೇಶ ಕರ್ನಾಟಕಕ್ಕೆ ಹಿನ್ನೆಡೆಯನ್ನು ನೀಡಿದ್ದು, ಈ ಬಗ್ಗೆ ಕರ್ನಾಟಕ ಮುಂದೆ ಯಾವ ರೀತಿ ಕಾನೂನು ಹೋರಾಟ ಮಾಡುತ್ತದೆ ಎಂದು ಕಾದು ನೋಡಬೇಕಿದೆ.