ದ.ಕ ಜಿಲ್ಲಾ ಶ್ರಮಿಕ ವರ್ಗಕ್ಕೆ ರೂ 323 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ

ಬೆಳ್ತಂಗಡಿ: ಕೋವಿಡ್- 19 ಎರಡನೆಯ ಅಲೆಯ ನಿಯಂತ್ರಣಕ್ಕಾಗಿ ಲಾಕ್ಡೌನ್ ಘೋಷಿಸಿದ ಹಿನ್ನಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಿ .ಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ 1250 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ಸಾಮಾನ್ಯ ವರ್ಗದ ಜನರಿಗೆ ತುಂಬಾ ಸಹಕಾರಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶ್ರಮಿಕ ವರ್ಗಕ್ಕೆ ಹೆಚ್ಚುವರಿಯಾಗಿ ವಿಶೇಷ ಪ್ಯಾಕೇಜ್ ಷೋಷಿಸುವಂತೆ ಶಾಸಕ ಹರೀಶ್ ಪೂಂಜರವರು ಜೂ. 3 ರಂದು ನೀಡಿದ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯ ಮಂತ್ರಿಗಳು ಇದೀಗ ಹೆಚ್ಚುವರಿ ಯಾಗಿ ರೂ.323 ಕೋಟಿ ವಿಶೇಷ ಪ್ಯಾಕೇಜನ್ನು ಷೋಷಣೆಯನ್ನು ಮಾಡಿದ್ದಾರೆ.
ದ.ಕ ಜಿಲ್ಲಾ ಶ್ರಮಿಕ ವರ್ಗಕ್ಕೆ ರೂ 323 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ
ಕರ್ನಾಟಕ ರಾಜ್ಯದ ಇತರ ಪ್ರದೇಶಗಳಿಗಿಂತ ಭೌಗೋಳಿಕವಾಗಿ ಬಿನ್ನವಾಗಿರುವ ಕರಾವಳಿ ಜನತೆ ವಿಭಿನ್ನ ರೀತಿಯ ಸಂಕಷ್ಟಕ್ಕೊಳಗಾಗಿದ್ದು ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಬಸ್ಸುಗಳು ಸಂಚರಿಸುವುದರಿಂದ ಅವುಗಳಲ್ಲಿ ದುಡಿಯುತ್ತಿರುವ ಚಾಲಕರು, ನಿರ್ವಾಹಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಭೋದಕ ಮತ್ತು ಭೋದ ಕೇತರ ಸಿಬ್ಬಂದಿಗಳು, ಪುರೋಹಿತ ವರ್ಗದವರು, ಧರ್ಮಧೈವಗಳ ಪರಿಚಾರಕರು , ಹೋಟೆಲ್ ಕಾರ್ಮಿಕರು , ಕಲ್ಯಾಣ ಮಂಟಪ ಮತ್ತು ದ್ವನಿ ಬೆಳಕು ಶಾಮಿಯಾನದಲ್ಲಿ ದುಡಿಯುವ ಕಾರ್ಮಿಕ ವರ್ಗದವರು, ಗೇರುಬೀಜ ಕಾರ್ಖಾನೆ, ಬೀಡಿ ಮತ್ತು ಇನ್ನಿತರ ವಲಯಗಳಲ್ಲಿ ದುಡಿಯುವ ಕಾರ್ಮಿಕ ವರ್ಗದ ಜನರು ಲಾಕ್ಡೌನ್ನಿಂದಾಗಿ ತೋದರೆಯನ್ನು ಅನುಭವಿಸುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಈ ಎಲ್ಲಾ ಶ್ರಮಿಕ ವರ್ಗಕ್ಕೆ ಹೆಚ್ಚುವರಿಯಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಾಗಿ ಮುಖ್ಯಮಂತ್ರಿಗಳಾದ ಬಿ .ಎಸ್ ಯಡಿಯೂರಪ್ಪ ರಿಗೆ ಸಲ್ಲಿಸಿದ ಮನವಿಯಲ್ಲಿ ಶಾಸಕ ಹರೀಶ್ ಪೂಂಜ ಒತ್ತಾಯಿಸಿದ್ದರು.