
ಮಂಗಳೂರು: ಶಾಸಕ ವೇದವ್ಯಾಸ್ ಕಾಮತ್ಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು, “ನನಗೆ ಸ್ವಲ್ಪ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದೆ. ನನಗೆ ಕೊರೊನಾ ಧೃಡಪಟ್ಟಿದ್ದು ಪಾಸಿಟಿವ್ ಆಗಿರುತ್ತದೆ. ನಾನು ಹೋಂ ಐಸೋಲೇಷನ್ ಆಗಿದ್ದೇನೆ. ನಾನು ಆರೋಗ್ಯವಾಗಿದ್ದೇನೆ” ಎಂದಿದ್ದಾರೆ
ಇನ್ನು “ಸಾರ್ವಜನಿಕರೂ ಕೂಡ ಆರೋಗ್ಯದ ಕಡೆ ಗಮನ ಹರಿಸಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ಅಂತಿಮ ಗೆಲುವು ನಮ್ಮದೇ ಆಗಲಿದೆ” ಎಂದು ಹೇಳಿದ್ದಾರೆ.













