ಕರಾವಳಿ
ಶ್ರೀ ರಸ್ತು ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಲಿಮಿಟೆಡ್ ವತಿಯಿಂದ ಆಹಾರ ಸಾಮಗ್ರಿಗಳ ಕೊಡುಗೆ

ಉಡುಪಿ:ಶ್ರೀ ರಾಮರಕ್ಷಾ ಸೇವಾ ಟ್ರಸ್ಟ್ (ರಿ.) ಉಡುಪಿ ಜಿಲ್ಲೆ ವತಿಯಿಂದ ಕಳೆದ ಹಲವಾರು ದಿನಗಳಿಂದಲೂ ಬಡ ಕುಟುಂಬಗಳಿಗೆ ಆಹಾರ ಕಿಟ್, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 8 ಜನರಿಗೆ ಔಷಧ ಹಾಗೂ ಹಲವಾರು ಬಡ ಕುಟುಂಬ ಕ್ಕೆ ನ್ಯೂಟ್ರಿಷನ್ ಫುಡ್ ಉಚಿತವಾಗಿ ನೀಡಿರುತ್ತಾರೆ.
ಸಂಸ್ಥೆಯ ಸೇವೆಯನ್ನು ಪರಿಗಣಿಸಿ ಶ್ರೀ ರಸ್ತು ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ಲಿಮಿಟೆಡ್ ವತಿಯಿಂದ ಸರಿ ಸುಮಾರು 23 ಸಾವಿರ ಮೌಲ್ಯದ ಆಹಾರ ಸಾಮಾಗ್ರಿ ಗಳನ್ನು ಉಚಿತವಾಗಿ ನೀಡಲಾಯಿತು .ಹಾಗೂ ಸಹಕಾರಿಯ ಅರ್ಹ ಬಡ ಕುಟುಂಬದ 50 ಸದಸ್ಯರಿಗೆ ಅಧ್ಯಕ್ಷರ ಹಾಗೂ ನಿರ್ದೇಶಕರ ಸಹಕಾರ ದಿಂದ ದಿನಸಿ ಸಾಮಾಗ್ರಿ ಹಾಗೂ ತಲಾ10 ಕೆ.ಜಿ ಅಕ್ಕಿ ಯನ್ನು ನೀಡಲಾಗುವುದು ಎಂದು ಸಹಕಾರಿಯ ಅಧ್ಯಕ್ಷರಾದ ರಾಮ್ ವಿ.ಕುಂದರ್ ತಿಳಿಸಿದರು.ಈ ಸಂದರ್ಭದಲ್ಲಿ ನಿರ್ದೇಶಕರಾದ ಪ್ರಶಾಂತ್. ಎಸ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಸರಿತಾ, ಹಾಗೂ ತನುಶ್ರೀ, ದಿವ್ಯ ಅಮೀನ್ ಉಪಸ್ಥಿತರಿದ್ದರು