ಉಡುಪಿಯ ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಘಟಕದಿಂದ ಲಾಕ್ ಡೌನ್ ಸಂದರ್ಭದಲ್ಲಿ ಮಧ್ಯಾಹ್ನದ ಬಿಸಿ ಊಟ ವಿತರಣೆ
ಉಡುಪಿಯ ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಘಟಕದಿಂದ ಲಾಕ್ ಡೌನ್ ಸಂದರ್ಭದಲ್ಲಿ ಉಡುಪಿ ನಗರ ವ್ಯಾಪ್ತಿಯ ನಿರಾಶ್ರಿತರಿಗೆ, ಹಸಿದವರಿಗೆ ಮಧ್ಯಾಹ್ನದ ಬಿಸಿ ಊಟ ವಿತರಣೆ.

ಜೆಸಿಐ ಉಡುಪಿ ಇಂದ್ರಾಳಿ ಘಟಕದಿಂದ 2020ರಲ್ಲಿ ಅಧ್ಯಕ್ಷ ಜೆಸಿ ಎಂ ಎನ್. ನಾಯಕ್ ಪ್ರಸ್ತುತ ವಲಯ XVರ ವಲಯಧಿಕಾರಿ ಇವರ ಸಾರಥ್ಯದಲ್ಲಿ ಪ್ರವರ್ತಿಸಲ್ಪಟ್ಟ ನೂತನ ಘಟಕ ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ 2021ರ ಘಟಕಾಧ್ಯಕ್ಷ ಮಾಜೀ ಸಿ ಆರ್ ಪಿ ಎಫ್ ಯೋಧ ಜೆಸಿ ಕೇಶವ ಆಚಾರ್ಯ ಇವರ ಸಮರ್ಥ ನಾಯಕತ್ವದೊಂದಿಗೆ ಉತ್ತಮ ಜನಪರ ಮಾನವೀಯತೆ ಮೆರೆವ ಕಾರ್ಯಕ್ರಮವನ್ನು ತಮ್ಮ ಘಟಕದ ಸದಸ್ಯ ಮಿತ್ರರು ಹಾಗೂ ಸಾರ್ವಜನಿಕ ದಾನಿಗಳ ಸಲಹೆ ಸಹಕಾರ ಗಳಿಂದ ಮೇ ತಿಂಗಳ 15 ನೇ ತಾರೀಕಿನಿಂದ ಸತತವಾಗಿ ನಿರಾಶ್ರಿತರಿಗೆ ಅನ್ನ ನೀಡುವ ಕಾಯಕವನ್ನು ಅತ್ಯುತ್ತಮ ರೀತಿಯಲ್ಲಿ ಮಾಡುತ್ತಿರವುದು ಪ್ರಶಂಸನೀಯ.
ಈ ಕಾರ್ಯಕ್ರಮವು ಈ ತಿಂಗಳ 15 ನೇ ತಾರೀಕಿನ ತನಕ ಮುಂದುವರಿಯಲಿದೆ ಎಂದು ಘಟಕದ ಅಧ್ಯಕ್ಷರು ತಿಳಿಸಿರುತ್ತಾರೆ.
ಘಟಕದ ಪದಾಧಿಕಾರಿಗಳು, ಸದಸ್ಯರು ವಿಶೇಷ ಮುತುವರ್ಜಿವಹಿಸಿ ಭಾಗಿಯಾಗಿ ಈ ಪುಣ್ಯ ಕಾರ್ಯ ದಲ್ಲಿ ಕೈಜೋಡಿಸಿ ಈ ಕಾರ್ಯಕ್ರಮದ ಯಶಸ್ಸಿಗೆ ಅವಿರತ ಶ್ರಮಿಸುತ್ತಿದ್ದಾರೆ, ಸಹಕರಿಸಿದ ಸರ್ವರಿಗೂ ಮತ್ತು ಇದರ ಹಿಂದಿನ ಪ್ರೇರಣೆ ಆಗಿರುವ ಘಟಕದ ಸಂಸ್ಥಾಪಕ ಜೆಸಿ ಎಂ ಎನ್ ನಾಯಕ್ ಹಾಗೂ ಆಹಾರ ವಿತರಣಾ ಕಾರ್ಯಕ್ಕೆ ಜೊತೆಗೆ ಸಹಕಾರವಿತ್ತ ಘಟಕದ ಎಲ್ಲಾ ಸದಸ್ಯ ಮಿತ್ರರಿಗೂ ಹಾಗೂ ವಿಶೇಷವಾಗಿ ಸಮಾಜ ಸೇವಕರು ಆದ ವಿಶು ಶೆಟ್ಟಿ ಅಂಬಲಪಾಡಿ ಇವರಿಗೂ ಘಟಕದ ಅಧ್ಯಕ್ಷರ ಜೆಸಿ ಕೇಶವ ಆಚಾರ್ಯ ಇವರು ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.