
ಉಡುಪಿ : ನಗರದ ಬಿ.ಆರ್.ಎಸ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ವೇತನ ಬಾಕಿ ಇರುವ ವಿಚಾರದಲ್ಲಿ ಇಂದು ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.
ಬಿ.ಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಸಿಬ್ಬಂದಿಗಳಿಗೆ ವೇತನ ಬಾಕಿ ಇರುವ ಕಾರಣ ಇಂದು ಎಲ್ಲಾ ವಿಭಾಗದ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೇ ಆಸ್ಪತ್ರೆಯ ಮುಂಭಾಗದಲ್ಲಿ ಧರಣಿ ಕುಳಿತ್ತಿದ್ದಾರೆ.
ಆಸ್ಪತ್ರೆಯ ಮುಂಭಾಗ ನಡೆದ ಧರಣಿಯಲ್ಲಿ ವೈದ್ಯರು, ನರ್ಸ್ ಗಳು,ಹಾಗೂ ಎಲ್ಲಾ ಸಿಬ್ಬಂದಿಗಳು ಇದ್ದಾರೆ ಎನ್ನಲಾಗಿದೆ.
“ಕಳೆದ ಮೂರು ತಿಂಗಳಿನಿಂದ ಯಾವುದೇ ವೇತನ ಸಿಗಲಿಲ್ಲ. ಕಳೆದ ವರ್ಷದ ಆಕ್ಟೋಬರ್ ನಿಂದ ಪಿಎಫ್ ಐಯನ್ನೂ ಕೊಡಲಿಲ್ಲ, ಸಂಬಳ ಕೊಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲಾ,ಇನ್ನೂ ಕೆಲಸ ಮಾಡಿ ಎಂದು ಹೇಳುತ್ತಾರೆ” ಎಂಬ ಆರೋಪವನ್ನು ಆಸ್ಪತ್ರೆಯ ಸಿಬ್ಬಂದಿಗಳು ಮಾಡಿದ್ದಾರೆ.
ಬಿ.ಆರ್ ಶೆಟ್ಟಿ ಆಸ್ಪತ್ರೆಯ ಸಿಬ್ಬಂದಿಗಳ ಪ್ರತಿಭಟನೆಯಿಂದ ಆಸ್ಪತ್ರೆಯ ರೋಗಿಗಳಿಗೆ ತೊಂದರೆಯಾಗಿದೆ.ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ಈಗ ಇವರ ಪ್ರತಿಭಟನೆಯಿಂದ ಸಮಸ್ಯೆಯಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.