
ನವದೆಹಲಿ: ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೋವಿಡ್ ನಿರ್ವಹಣಾ ಸಮಿತಿಯ ಸದಸ್ಯ ಮತ್ತು ನೀತಿ ಅಯೋಗ್ ಸದಸ್ಯ ವಿ.ಕೆ.ಪಾಲ್ ಹೇಳಿದ್ದಾರೆ.
ಮೂರನೇ ಅಲೆಯು ವಿಶೇಷವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹದಿಹರೆಯದವರಿಗೆ
ಸಿರೋಪ್ರಿವೆಲೆನ್ಸ್ ಹೇಗಿದೆಯೋ ಮಕ್ಕಳಿಗೂ ಕೂಡ ಇದೆ. ಆದರೆ ಮಕ್ಕಳಿಗೆ ಪ್ರತ್ಯೇಕವಾಗಿ ಕೊರೋನಾ ಮೂರನೇ ಅಲೆಯ ಪರಿಣಾಮ ಹೆಚ್ಚಾಗಿರುತ್ತದೆ ಎಂಬುದಕ್ಕೆ ಯಾವುದೇ ನಿರ್ಣಾಯಕ ಅಥವಾ ಅಧಿಕೃತ ಪುರಾವೆಗಳಿಲ್ಲ ಎಂದು ಅವರು ಹೇಳಿದರು.
ಪೋಷಕರ ಲಸಿಕೆ ಮಕ್ಕಳ ಮೇಲೆ ಇದೇ ರೀತಿಯ ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಇಂಡಿಯನ್ ಪೀಡಿಯಾಟ್ರಿಕ್ ಅಸೋಸಿಯೇಷನ್ ಕೂಡ ಹೇಳಿದೆ. ಹೀಗಾಗಿ ಲಸಿಕೆ ವಿಷಯದಲ್ಲಿ ಪೋಷಕರು ಹಿಂಜರಿಯಬಾರದು. ಪೋಷಕರು ವ್ಯಾಕ್ಸಿನೇಷನ್ ಪಡೆದರೆ ಮಕ್ಕಳಲ್ಲಿ ವೈರಸ್ ಹರಡುವುದನ್ನು ಸ್ವಲ್ಪ ಮಟ್ಟಿಗೆ ತಡೆಯಲು ಸಹಾಯ ಮಾಡುತ್ತದೆ ಎಂದು ವಿ.ಕೆ.ಪಾಲ್ ಅಭಿಪ್ರಾಯಪಟ್ಟಿದ್ದಾರೆ.