
ಮೈಸೂರು: ಮೈಸೂರಿನಲ್ಲಿ 30 ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದೆ. 2 – 12 ವರ್ಷ ವಯೋಮಿತಿಯ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗಿಸಲಾಗಿದೆ.
ಸದ್ಯ ಕೋವ್ಯಾಕ್ಸಿನ್ ನೀಡಿ 6 ದಿನಗಳಾಗಿದ್ದು. ಎಲ್ಲಾ 30 ಮಕ್ಕಳು ಆರೋಗ್ಯವಾಗಿದ್ದಾರೆ. ಆದರೆ ಇಬ್ಬರು ಮಕ್ಕಳಿಗೆ ಜ್ವರ ಬಂದಿದೆ ಎಂದು ಹೇಳಲಾಗಿದೆ.
ವಯಸ್ಕರಿಗೆ ನೀಡುವಷ್ಟೇ ಪ್ರಮಾಣದಲ್ಲಿ ಮಕ್ಕಳಿಗೂ ಕೊರೊನಾ ಲಸಿಕೆಯನ್ನು ನೀಡಲಾಗಿದ್ದು, ಒಂದು ತಿಂಗಳ ನಂತರ ರಕ್ತದ ಮಾದರಿಯನ್ನು ಪರೀಕ್ಷಿಸಿ ಎರಡನೇ ಡೋಸ್ ನೀಡಲು ಪ್ಲ್ಯಾನ್ ರೂಪಿಸಲಾಗಿದೆ ಎಂದು ಚೆಲುವಾಂಬ ಆಸ್ಪತ್ರೆಯ ಡಾ.ಪ್ರದೀಪ್ ಹಾಗೂ ಡಾ.ಪ್ರಶಾಂತ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 175 ಮಕ್ಕಳ ಮೇಲೆ ಪ್ರಯೋಗ ನಡೆಸಲಾಗಿದ್ದು, ಮುಂದಿನ 6 ತಿಂಗಳವರೆಗೆ ಪ್ರಯೋಗ ನಡೆಯಲಿದೆ ಎಂದು ಹೇಳಲಾಗಿದೆ.