
ಉಡುಪಿ : ತೆಂಕ ಎರ್ಮಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾಸಗಿ ಪಟ್ಟಾ ಸ್ಥಳದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾದ ಸುಮಾರು 800 ಟನ್ ಸಿಲಿಕಾ ಮರಳನ್ನು ಕಾಪು ತಹಶಿಲ್ದಾರ್ ಪ್ರತಿಭಾ ಆರ್. ತಂಡ ದಾಳಿ ನಡೆಸಿ ವಶಕ್ಕೆ ಪಡೆದು, ಮುಂದಿನ ಕಾನೂನು ಪ್ರಕ್ರಿಯೆಗಾಗಿ ಭೂ ಮತ್ತು ಗಣಿ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.
ಗಿರೀಶ್ ಎಂಬಾತ ಪಟ್ಟಾ ಸ್ಥಳದಲ್ಲಿ ಅಕ್ರಮವಾಗಿ ಸಿಲಿಕಾ ಮರಳು ದಾಸ್ತಾನು ಮಾಡಿದ ಬಗ್ಗೆ ಮಾಹಿತಿ ತಿಳಿದ ಕಾಪು ತಹಶಿಲ್ದಾರ್ ತಂಡ ದಾಳಿ ನಡೆಸಿದೆ. ತಂಡದಲ್ಲಿ ಕಾಪು ಆರ್. ಐ. ಸುಧೀರ್, ತೆಂಕ ಎರ್ಮಾಳು ವಿ.ಎ ಶ್ಯಾಮ್ ಸುಂದರ್ ಮುಂತಾದವರಿದ್ದರು.