ರಾಷ್ಟ್ರೀಯ

ಮದುವೆ ಊಟದಲ್ಲಿ ಮೀನಿನ ತಲೆಗಾಗಿ ಮಾರಾಮಾರಿ | ಮನುಷ್ಯರ ತಲೆ ಬೀಳುವ ಹಂತ ತಲುಪಿತ್ತು ಫೈಟಿಂಗ್ !!

ಪಟನಾ: ಮದುವೆಯಾಗುವ ವಧು ವರರ ಕುಟುಂಬದ ನಡುವೆ ಯಾವ್ಯಾವುದೋ ಕಾರಣಕ್ಕೆ ಜಗಳವಾಗುವುದನ್ನು ನಾವು ಕಂಡಿದ್ದೇವೆ. ಮದುವೆ ಮನೆಯ ಜಗಳಗಳಿಗೆ ಶತ ಶತಮಾನ ಗಳ ಇತಿಹಾಸವಿದೆ. ಭಾರತೀಯ ಮದುವೆಗಳಲ್ಲಿ ವಧು ವರರ ಕಡೆಗೆ ಸಣ್ಣಪುಟ್ಟ ಮುನಿಸು ಜಗಳಗಳು ಆಗದೆ ಮದುವೆ ಮುಗಿದರೆ ಅದೂ ಒಂದು ಮದುವೆನಾ ಎನ್ನುವಂತೆ ಜಗಳಗಳು ಕಾಮನ್ ಆಗಿದೆ. ಯಾಕೆಂದರೆ ಮದುವೆ ಮನೆಗಳು ವ್ಯಕ್ತಿಗಳ ಈಗೋ ನ ಎಪಿ ಸೆಂಟರುಗಳು.

ಅದೇ ರೀತಿ ಇಲ್ಲೊಂದು ಕಡೆ ಮದುವೆ ಮನೆಯಲ್ಲಿ ಜಗಳ ನಡೆದಿದೆ. ಮದುವೆ ಊಟದಲ್ಲಿ ಬಡಿಸಲಾಗುವ ಮೀನಿನ ತಲೆಗಾಗಿ ಹೊಡೆದಾಟ ನಡೆದಿದ್ದು, ಮೀನಿನ ತಲೆಗಾಗಿ ಮನುಷ್ಯನ ತಲೆಯೇ ಕೆಳಕ್ಕೆ ಬೀಳುವಷ್ಟು ದೊಡ್ಡ ಮಾರಾಮಾರಿ ನಡೆದು ಹೋಗಿದೆ.

ಇಂತದ್ದೊಂದು ವಿಚಿತ್ರ ಘಟನೆ ಬಿಹಾರದ ಗೋಪಾಲ್‌ಗಂಜ್ ಗ್ರಾಮದಲ್ಲಿ ನಡೆದಿದೆ. ಅಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ವರನ ಮನೆಗೆ ದಿಬ್ಬಣ ತಂದು ಮದುವೆ ಮಾಡಿದ್ದ ವಧುವಿಕ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಊಟಕ್ಕೆಂದು ಕುಳಿತಿದ್ದರು. ಭರ್ಜರಿ ಬಾಡೂಟವೂ ನಡೆಯುತ್ತಿತ್ತು. ಈ ವೇಳೆ ವಧುವಿನ ಕಡೆ ವ್ಯಕ್ತಿಯೊಬ್ಬ ಮೀನಿನ ತಲೆ ತಂದು ಹಾಕುವಂತೆ ಕೇಳಿದ್ದಾನೆ. ಆದರೆ ವರನ ಕಡೆಯಿಂದ ಊಟ ಬಡಿಸುವ ಕೆಲಸದಲ್ಲಿ ಬ್ಯುಸಿ ಇದ್ದ ಕಾರಣ ಅದನ್ನು ತಂದು ಹಾಕುವುದಕ್ಕೆ ತಡವಾಗಿದೆ.

ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳ ಹತ್ತಿಕೊಂಡಿದೆ. ಆರಂಭವಾಗಿದೆ. ಜಗಳ ತಾರಕಕ್ಕೇರಿ ಕೋಲು, ಕಬ್ಬಿಣದ ರಾಡಿನಿಂದಲೂ ಹೊಡೆದಾಡಿಕೊಂಡಿದ್ದಾರೆ. ಮೀನಿನ ತಲೆಗಾಗಿ ಮನುಷ್ಯನ ತಲೆಗೇ ಸಂಚಕಾರ ಬಂದಿದೆ.

ಈ ಹೊಡೆದಾಟದಲ್ಲಿ ಗಂಡು ಮತ್ತು ಹೆಣ್ಣಿನ ಕಡೆಯ 11 ಜನರಿಗೆ ಗಾಯವಾಗಿದೆ. ಅನೇಕರ ತಲೆ, ಕೈ ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ. ಸದ್ಯ 11 ಮಂದಿಯನ್ನೂ ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!