ಕರಾವಳಿ
ಕರಾವಳಿಯಲ್ಲಿ ಮುಂದುವರೆದ ಮಳೆ ಅಬ್ಬರ್ : ರೆಡ್ ಅಲರ್ಟ್ ಘೋಷಣೆ

ಮಂಗಳೂರು ಜೂನ್ 15: ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಹವಾಮಾನ ಇಲಾಖೆ ಜೂನ್ 15 ಹಾಗೂ 16ರಂದು ರೆಡ್ ಅಲರ್ಟ್ ಹಾಗೂ ಜೂನ್ 17ರಂದು ಆರೆಂಜ್ ಅಲರ್ಟ್ ಘೋಷಿಸಿದೆ.
ಕಳೆದ ಮೂರು ದಿನಗಳಿಂದ ಪ್ರಾರಂಭವಾದ ಮಳೆ ಮುಂದುವರೆದಿದೆ. ಮಳೆಯ ಜೊತೆ ಬಲವಾದ ಗಾಳಿ ಕೂಡಾ ಬೀಸಿದ್ದ ಕಾರಣ ಹಲವು ಕಡೆಗಳಲ್ಲಿ ಹಾನಿಯುಂಟಾಗಿದೆ. ಕರಾವಳಿ ಜಿಲ್ಲೆಗಳಲ್ಲಿನ ನದಿಗಳು ಉಕ್ಕಿ ಹರಿಯುತ್ತಿವೆ. ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತ್ತು.