
ಕೊರೋನಾ ವಾರಿಯರ್ಸ್ ಆಗಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಹಾಗೂ ಶಿರ್ವ ವಲಯದ ಹಲವು ಬಡ ಕುಟುಂಬಗಳಿಗೆ ಸಮಾಜ ಸೇವಕಿ ನೀತಾ ಪ್ರಭು ಕಾಪು ಮತ್ತು ಹಿಂದು ಜಾಗರಣ ವೇದಿಕೆ ಶಿರ್ವ ವಲಯ ವತಿಯಿಂದ ರೇಶನ್ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ನೀತಾ ಪ್ರಭು ಕಾಪು , ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಅಲೆವೂರು ಶ್ರೀಕಾಂತ್ ನಾಯಕ್, ವೈದ್ಯಾಧಿಕಾರಿ ಗಾಯತ್ರಿ, ಚರಣ್ ಶಾಂತಿ ಕಟಪಾಡಿ, ಗಿರಿಧರ್ ಪ್ರಭು, ಹಿಂದು ಜಾಗರಣ ವೇದಿಕೆ ಜಿಲ್ಲಾ ಪ್ರಮುಖರಾದ ಉಮೇಶ್ ಸೂಡ, ಹಿಂ.ಜಾ.ವೇ ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಗುರುಪ್ರಸಾದ್ ಸೂಡ, ಹಿಂ.ಜಾ.ವೇ ಶಿರ್ವ ವಲಯ ಅಧ್ಯಕ್ಷರಾದ ರಕ್ಷಿತ್ ಶಿರ್ವ ಮತ್ತಿತರರು ಉಪಸ್ಥಿತರಿದ್ದರು.