ರಾಷ್ಟ್ರೀಯ
ಉಚಿತವಾಗಿ ಸಿಗುವ 14 ಕೋಟಿ ರೂಪಾಯಿ ವಾರ್ಷಿಕ ಅನುದಾನ ಬೇಡ ಎಂದ ಡಚ್ ರಾಜಕುಮಾರಿ !

ಲಂಡನ್: ನೆದರ್ ಲ್ಯಾಂಡ್ ರಾಜಕುಮಾರಿ 17 ರ ಹರೆಯದ ಅಮಾಲಿಯಾ ಉಚಿತವಾಗಿ ಸಿಗುವ 14 ಕೋಟಿ ರೂಪಾಯಿ ವಾರ್ಷಿಕ ಅನುದಾನ ನಿರಾಕರಿಸಿದ್ದಾರೆ.
ಡಚ್ ಕಾನೂನಿನ ಪ್ರಕಾರ ನನಗೆ 18 ವರ್ಷ ತುಂಬುವಾಗ ವಾರ್ಷಿಕ 14 ಕೋಟಿ ರೂಪಾಯಿ ಅನುದಾನ ಪಡೆಯಲು ನಾನು ಅರ್ಹಳಾಗುತ್ತೇನೆ. ಆದರೆ ಈ ಹಣ ಪಡೆಯಲು ನಾನೇನು ಕೆಲಸ ಮಾಡಿದ್ದೇನೆ ಎಂಬ ಪ್ರಶ್ನೆ ಕೂಡ ನನ್ನನ್ನು ಕಾಡಿದೆ. ಇಷ್ಟು ಮೊತ್ತದ ಹಣ ಯಾವುದೇ ಕೆಲಸ ಮಾಡದೆ ಪಡೆಯಲು ಮನಸ್ಸು ಒಪ್ಪುತ್ತಿಲ್ಲ. ಅದಕ್ಕಾಗಿ ಅದನ್ನು ನಿರಾಕರಿಸಿದ್ದೇನೆ ಎಂದು ರಾಜಕುಮಾರಿ ಅಮಾಲಿಯಾ ತಿಳಿಸಿದ್ದಾರೆ.
ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 2021, ಡಿಸೆಂಬರ್ 7ರಂದು ಅಮಾಲಿಯ ಅವರಿಗೆ 18 ವರ್ಷ ಪೂರ್ಣಗೊಳ್ಳಲಿದ್ದು, ಡಚ್ ಕಾನೂನು ಪ್ರಕಾರ ಅನುದಾನಕ್ಕೆ ಅರ್ಹತೆ ಪಡೆಯುತ್ತಾರೆ.