ಕರಾವಳಿ
ಬೈಂದೂರು: ರಾಷ್ಟ್ರೀಯ ಹೆದ್ದಾರಿ 66 ಒತ್ತಿನೆಣೆಯ ಬಳಿ ಗುಡ್ಡ ಕುಸಿತ

ಉಡುಪಿ: ಬೈಂದೂರು ಬಳಿ ರಾಷ್ಟ್ರೀಯ ಹೆದ್ದಾರಿ 66 ಒತ್ತಿನೆಣೆಯ ಬಳಿ ಗುಡ್ಡ ಕುಸಿತವಾಗಿದೆ.
ಸತತವಾಗಿ ಸುರಿದ ಮಳೆಯ ಹಿನ್ನಲೆಯಲ್ಲಿ ಗುಡ್ಡದ ಕೆಲವು ಭಾಗ ಕುಸಿತವಾಗಿದೆ. ಹೆದ್ದಾರಿ ಬಳಿ ಗುಡ್ಡ ಜಾರಿದ ಹಿನ್ನಲೆಯಲ್ಲಿ ರಸ್ತೆ ಸಂಚಾರಕ್ಕೆ ಕೊಂಚ ಅಡಚಣೆ ಉಂಟಾಗಿದೆ.
ಸದ್ಯ ಗುತ್ತಿಗೆದಾರ ಐಆರ್ ಬಿ ಕಂಪನಿಯಿಂದ ಕುಸಿದ ಗುಡ್ಡದ ಮಣ್ಣು ತೆರವು ಕಾರ್ಯ ನಡೆಯುತ್ತಿದೆ.
ಕಳೆದ ಬಾರಿ ಮಳೆಗಾಲದಲ್ಲೂ ಕೂಡ ಇದೇ ಭಾಗದಲ್ಲಿ ರಸ್ತೆ ಪಕ್ಕದ ಗುಡ್ಡ ಕುಸಿದಿತ್ತು. ಬಳಿಕ ಅಪಾಯಕಾರಿ ಸ್ಥಿತಿಯಲ್ಲಿದ್ದ ಗುಡ್ಡದ ಬದುಗಳಿಗೆ ರಿವಿಟ್ಮೆಂಟ್ ಮಾಡಲಾಗಿತ್ತು.