ಉಡುಪಿ ಜಿಲ್ಲೆಯಲ್ಲಿ ಯಥಾ ಸ್ಥಿತಿ ಮುಂದುವರಿಯಲಿದೆ : ಜಿಲ್ಲಾಧಿಕಾರಿ

ಉಡುಪಿ: ಆನ್’ಲಾಕ್ 2. 0 ನಲ್ಲೂ ಜಿಲ್ಲೆಯಲ್ಲಿ ಈ ಮುಂಚಿನ ನಿಯಮ ಮುಂದುವರಿಯಲಿದೆ ಎಂದು ಶನಿವಾರ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪಾಸಿಟಿವಿಟಿ ದರ 5% ಕ್ಕಿಂತ ಹೆಚ್ಚಿರುವ ಕಾರಣ ಈ ನಿರ್ಧಾರ ರಾಜ್ಯ ಸರ್ಕಾರ ಕೈಗೊಂಡಿದೆ.ಕೆಲವು ಜಿಲ್ಲೆಗಳಲ್ಲಿ ಲಾಕ್‌ಡೌನ್‌ನಲ್ಲಿ ವಿನಾಯಿತಿ ನೀಡಿ ರಾಜ್ಯ ಸರಕಾರ ಶನಿವಾರ ಆದೇಶ ನೀಡಿದ್ದು, ಆದರೆ ಉಡುಪಿಯಲ್ಲಿ ಜೂ.11ರಂದು ಹೊರಡಿಸಿದ ಮಾರ್ಗಸೂಚಿ ಮುಂದಿನ ಆದೇಶದವರೆಗೆ ಮುಂದುವರಿಯಲಿದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳು ಬೆಳಗ್ಗೆ 6 ರಿಂದ ಅಪರಾಹ್ನ 2 ರವರೆಗೆ ಮಾತ್ರ ತೆರೆದಿರಲಿದೆ ಎಂದವರು ತಿಳಿಸಿದರು.
ಸದ್ಯ ನಮ್ಮ ಜಿಲ್ಲೆಯಲ್ಲಿ ಜೂ.11ರ ಲಾಕ್‌ಡೌನ್ ಸಡಿಲಿಕೆ ಆದೇಶವೇ ಮುಂದುವರೆಯಲಿದೆ. ಬೆಳಗ್ಗೆ 6ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿಡಲು ಅವಕಾಶ ನೀಡಲಾಗುವುದು. ಉಳಿದೆಲ್ಲಾ ಮಾರ್ಗಸೂಚಿಗಳು ಹಿಂದಿನಂತೆ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.
ಇದೀಗ ಉಡುಪಿ ಶಾಸಕ ರಘುಪತಿ ಭಟ್ ಲಾಕ್’ಡೌನ್ ಸಡಿಲಿಕೆಗೆ ಮನವಿ ಮಾಡಿದ್ದು ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆಯೆಂಬುವುದನ್ನು ಕಾದು ನೋಡಬೇಕಾಗಿದೆ.